1َى الَّذِينَ عَاهَدْتُمْ مِنَ الْمُشْرِكِينَ

ನೀವು ಒಪ್ಪಂದ ಮಾಡಿಕೊಂಡಿದ್ದ 'ಬಹುದೇವವಿಶ್ವಾಸಿ'ಗಳಿಗೆ ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಕಡೆಯಿಂದ ಒಪ್ಪಂದ ವಿಮುಕ್ತತೆಯ ಘೋಷಣೆಯಿದು.


2فَسِيحُوا فِي الْأَرْضِ أَرْبَعَةَ أَشْهُرٍ وَاعْلَمُوا أَنَّكُمْ غَيْرُ مُعْجِزِي اللَّهِ ۙ وَأَنَّ اللَّهَ مُخْزِي الْكَافِرِينَ

ಆದುದರಿಂದ ನೀವು ಇನ್ನೂ ನಾಲ್ಕು ತಿಂಗಳು ನಾಡಿನಲ್ಲಿ ಸಂಚರಿಸಿಕೊಳ್ಳಿರಿ. ನೀವು ಅಲ್ಲಾಹನನ್ನು ಪರಾಜಿತಗೊಳಿಸಲಾರಿರೆಂಬುದನ್ನೂ ಅಲ್ಲಾಹನು ಸತ್ಯನಿಷೇಧಿಗಳನ್ನು ಅವಮಾನಗೊಳಿಸಲಿರುವನೆಂಬುದನ್ನೂ ಚೆನ್ನಾಗಿ ತಿಳಿದುಕೊಳ್ಳಿರಿ.


3وَأَذَانٌ مِنَ اللَّهِ وَرَسُولِهِ إِلَى النَّاسِ يَوْمَ الْحَجِّ الْأَكْبَرِ أَنَّ اللَّهَ بَرِيءٌ مِنَ الْمُشْرِكِينَ ۙ وَرَسُولُهُ ۚ فَإِنْ تُبْتُمْ فَهُوَ خَيْرٌ لَكُمْ ۖ وَإِنْ تَوَلَّيْتُمْ فَاعْلَمُوا أَنَّكُمْ غَيْرُ مُعْجِزِي اللَّهِ ۗ وَبَش

ಅಲ್ಲಾಹನೂ ಅವನ ಸಂದೇಶವಾಹಕರೂ 'ಬಹುದೇವವಿಶ್ವಾಸಿ'ಗಳಿಂದ ಹೊಣೆ ವಿಮುಕ್ತರಾಗಿರುವರೆಂದು ಅಲ್ಲಾಹ್ ಮತ್ತು ಅವನ ರಸೂಲರ ಕಡೆಯಿಂದ 'ಹಜ್ಜುಲ್ ಅಕ್ಬರ್' (ಮಹಾ ಹಜ್ಜ್ ಯಾತ್ರೆಯ) ದಿನದಂದು ಮಾಡಲಾಗುತ್ತಿರುವ ಸಾರ್ವತ್ರಿಕ ಘೋಷಣೆಯಿದು. ನೀವು ಪಶ್ಚಾತ್ತಾಪಪಟ್ಟರೆ ನಿಮಗೇ ಒಳಿತು. ನೀವು ವಿಮುಖರಾದರೆ, ಅಲ್ಲಾಹನನ್ನು ಪರಾಜಿತಗೊಳಿಸಲಾರಿರೆಂದು ಚೆನ್ನಾಗಿ ತಿಳಿದು ಕೊಳ್ಳಿರಿ. ಓ ಪೈಗಂಬರರೇ, ಸತ್ಯನಿಷೇಧಿಗಳಿಗೆ ವೇದನಾಯುಕ್ತ ಯಾತನೆಯ ಸುವಾರ್ತೆ ತಿಳಿಸಿಬಿಡಿರಿ.


4إِلَّا الَّذِينَ عَاهَدْتُمْ مِنَ الْمُشْرِكِينَ ثُمَّ لَمْ يَنْقُصُوكُمْ شَيْئًا وَلَمْ يُظَاهِرُوا عَلَيْكُمْ أَحَدًا فَأَتِمُّوا إِلَيْهِمْ عَهْدَهُمْ إِلَىٰ مُدَّتِهِمْ ۚ إِنَّ اللَّهَ يُحِبُّ الْمُتَّقِينَ

ನೀವು ಒಪ್ಪಂದ ಮಾಡಿಕೊಂಡಿದ್ದು, ತಮ್ಮ ಒಪ್ಪಂದ ಪಾಲನೆಯಲ್ಲಿ ನಿಮ್ಮೊಂದಿಗೆ ಯಾವತ್ತೂ ಲೋಪವೆಸಗದಿದ್ದರೆ ಹಾಗೂ ನಿಮ್ಮ ವಿರುದ್ಧ ಯಾರಿಗೂ ಸಹಾಯ ಮಾಡದಿದ್ದರೆ, ಆ 'ಬಹುದೇವವಿಶ್ವಾಸಿ'ಗಳು ಇದಕ್ಕೆ ಹೊರತಾಗಿದ್ದಾರೆ. ಇಂಥವ ರೊಂದಿಗೆ ನೀವೂ ಅವಧಿಯ ವರೆಗೆ ಒಪ್ಪಂದವನ್ನು ಪಾಲಿಸಿರಿ. ಏಕೆಂದರೆ, ಅಲ್ಲಾಹ್ 'ಧರ್ಮನಿಷ್ಠ'ರನ್ನೇ ಮೆಚ್ಚುತ್ತಾನೆ.


5فَإِذَا انْسَلَخَ الْأَشْهُرُ الْحُرُمُ فَاقْتُلُوا الْمُشْرِكِينَ حَيْثُ وَجَدْتُمُوهُمْ وَخُذُوهُمْ وَاحْصُرُوهُمْ وَاقْعُدُوا لَهُمْ كُلَّ مَرْصَدٍ ۚ فَإِنْ تَابُوا وَأَقَامُوا الصَّلَاةَ وَآتَوُا الزَّكَاةَ فَخَلُّوا سَبِيلَهُمْ ۚ إِنَّ اللَّهَ غ

ನಿಷೇಧಿತ ಮಾಸಗಳು ಕಳೆದ ಬಳಿಕ 'ಬಹುದೇವವಿಶ್ವಾಸಿ'ಗಳನ್ನು ಸಿಕ್ಕಲ್ಲಿ ವಧಿಸಿರಿ. ಅವರನ್ನು ಸೆರೆಹಿಡಿಯಿರಿ. ಮುತ್ತಿಗೆ ಹಾಕಿರಿ. ಬೇಹು ನಡೆಸುವಲ್ಲೆಲ್ಲ ಅವರನ್ನು ಹೊಂಚುಹಾಕುತ್ತ ಕುಳಿತುಕೊಳ್ಳಿರಿ. ಮುಂದೆ ಅವರು ಪಶ್ಚಾತ್ತಾಪಪಟ್ಟರೆ, ನಮಾಝನ್ನು ಸಂಸ್ಥಾಪಿಸಿದರೆ ಮತ್ತು ಝಕಾತ್ ಕೊಟ್ಟರೆ ಅವರನ್ನು ಬಿಟ್ಟುಬಿಡಿರಿ. ಅಲ್ಲಾಹ್ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.


6وَإِنْ أَحَدٌ مِنَ الْمُشْرِكِينَ اسْتَجَارَكَ فَأَجِرْهُ حَتَّىٰ يَسْمَعَ كَلَامَ اللَّهِ ثُمَّ أَبْلِغْهُ مَأْمَنَهُ ۚ ذَٰلِكَ بِأَنَّهُمْ قَوْمٌ لَا يَعْلَمُونَ

'ಬಹುದೇವವಿಶ್ವಾಸಿ'ಗಳ ಪೈಕಿ ಯಾರಾದರೂ (ಅಲ್ಲಾಹನ ವಾಣಿಯನ್ನಾಲಿಸಲಿಕ್ಕಾಗಿ) ನಿಮ್ಮೊಡನೆ ಅಭಯ ಯಾಚಿಸಿ ನಿಮ್ಮ ಬಳಿಗೆ ಬರಲಿಚ್ಛಿಸಿದರೆ ಅಲ್ಲಾಹನ ವಚನವನ್ನು ಅವನು ಆಲಿಸಿಕೊಳ್ಳುವವರೆಗೆ ಅವನಿಗೆ ಅಭಯ ನೀಡಿರಿ. ಅನಂತರ ಅವನನ್ನು ಅವನ ಸುರಕ್ಷಾಸ್ಥಾನಕ್ಕೆ ತಲುಪಿಸಿಬಿಡಿರಿ. ಅವರು ತಿಳುವಳಿಕೆಯಿಲ್ಲದವರಾದುದರಿಂದ ಹೀಗೆ ಮಾಡಬೇಕಾಗಿದೆ.


7كَيْفَ يَكُونُ لِلْمُشْرِكِينَ عَهْدٌ عِنْدَ اللَّهِ وَعِنْدَ رَسُولِهِ إِلَّا الَّذِينَ عَاهَدْتُمْ عِنْدَ الْمَسْجِدِ الْحَرَامِ ۖ فَمَا اسْتَقَامُوا لَكُمْ فَاسْتَقِيمُوا لَهُمْ ۚ إِنَّ اللَّهَ يُحِبُّ الْمُتَّقِينَ

ಈ 'ಬಹುದೇವವಿಶ್ವಾಸಿ'ಗಳಿಗೆ ಅಲ್ಲಾಹ್ ಮತ್ತು ಅವನ ರಸೂಲರ ಬಳಿ ಒಪ್ಪಂದ ವಿರುವುದಾದರೂ ಹೇಗೆ? 'ಮಸ್ಜಿದುಲ್ ಹರಾಮ್'ನ ಬಳಿ ಒಪ್ಪಂದ ಮಾಡಿ ಕೊಂಡವರೊಡನೆ ಹೊರತು. ಅವರು ನಿಮ್ಮೊಡನೆ ನೇರವಾಗಿರುವವರೆಗೂ ನೀವು ಅವರೊಡನೆ ನೇರವಾಗಿರಿ. ಏಕೆಂದರೆ ಅಲ್ಲಾಹ್ 'ಧರ್ಮನಿಷ್ಠ'ರನ್ನು ಮೆಚ್ಚುತ್ತಾನೆ.


8كَيْفَ وَإِنْ يَظْهَرُوا عَلَيْكُمْ لَا يَرْقُبُوا فِيكُمْ إِلًّا وَلَا ذِمَّةً ۚ يُرْضُونَكُمْ بِأَفْوَاهِهِمْ وَتَأْبَىٰ قُلُوبُهُمْ وَأَكْثَرُهُمْ فَاسِقُونَ

ಆದರೆ ಅವರ ಹೊರತು ಇತರ 'ಬಹುದೇವವಿಶ್ವಾಸಿ'ಗಳೊಂದಿಗೆ ಒಪ್ಪಂದವಿರು ವುದಾದರೂ ಹೇಗೆ? ಅವರ ಅವಸ್ಥೆಯೇನೆಂದರೆ, ಅವರು ನಿಮ್ಮ ಮೇಲೆ ಜಯಗಳಿಸಿದರೆ ನಿಮ್ಮ ವಿಷಯದಲ್ಲಿ ಬಾಂಧವ್ಯವನ್ನಾಗಲಿ ಒಪ್ಪಂದದ ಹೊಣೆಯನ್ನಾಗಲಿ ಪರಿಗಣಿಸುವುದಿಲ್ಲ. ಅವರು ಕೇವಲ ಬಾಯಿಮಾತುಗಳಿಂದ ನಿಮ್ಮನ್ನು ಮೆಚ್ಚಿಸಲು ಯತ್ನಿಸುತ್ತಾರೆ. ಆದರೆ ಅವರ ಅಂತಃಕರಣಗಳು ನಿಷೇಧಿಸುತ್ತವೆ. ಅವರಲ್ಲಿ ಹೆಚ್ಚಿನವರು 'ಕರ್ಮಭ್ರಷ್ಟರು.'


9اشْتَرَوْا بِآيَاتِ اللَّهِ ثَمَنًا قَلِيلًا فَصَدُّوا عَنْ سَبِيلِهِ ۚ إِنَّهُمْ سَاءَ مَا كَانُوا يَعْمَلُونَ

ಅವರು ಅಲ್ಲಾಹನ 'ಸೂಕ್ತ'ಗಳ ಬದಲಿಗೆ ಅತ್ಯಲ್ಪ ಬೆಲೆಯನ್ನು ಸ್ವೀಕರಿಸಿಕೊಂಡರು. ಅನಂತರ ಅಲ್ಲಾಹನ ಮಾರ್ಗಕ್ಕೆ ತಡೆಯಾಗಿ ನಿಂತರು. ಅವರು ಮಾಡುತ್ತಿದ್ದ ಕಾರ್ಯಗಳೆಲ್ಲ ಅತ್ಯಂತ ನಿಕೃಷ್ಟವಾಗಿದ್ದವು.


10لَا يَرْقُبُونَ فِي مُؤْمِنٍ إِلًّا وَلَا ذِمَّةً ۚ وَأُولَٰئِكَ هُمُ الْمُعْتَدُونَ

ಒಬ್ಬ ಸತ್ಯವಿಶ್ವಾಸಿಯ ವಿಷಯದಲ್ಲಿ ಇವರು ಬಾಂಧವ್ಯವನ್ನಾಗಲಿ ಒಪ್ಪಂದದ ಹೊಣೆಯನ್ನಾಗಲಿ ಪರಿಗಣಿಸುವುದಿಲ್ಲ. ಅತಿರೇಕವು ಯಾವಾಗಲೂ ಅವರ ಕಡೆಯಿಂದಲೇ ಆಗಿದೆ.