1 سَبِّحِ اسْمَ رَبِّكَ الْأَعْلَى
(ಸಂದೇಶವಾಹಕರೇ) ನಿಮ್ಮ ಸರ್ವೋನ್ನತ ಪ್ರಭುವಿನ ನಾಮವನ್ನು ಜಪಿಸಿರಿ,
2الَّذِي خَلَقَ فَسَوَّىٰ
ಅವನು ಸೃಷ್ಟಿಸಿದನು ಮತ್ತು ಸಂತುಲಿತಗೊಳಿಸಿದನು.
3وَالَّذِي قَدَّرَ فَهَدَىٰ
ಅವನು ವಿಧಿಯನ್ನು ನಿರ್ಣಯಿಸಿದನು. ಆಮೇಲೆ ಮಾರ್ಗದರ್ಶನ ಮಾಡಿದನು.
4وَالَّذِي أَخْرَجَ الْمَرْعَىٰ
ಅವನು ಸಸ್ಯಗಳನ್ನು ಬೆಳೆಸಿದನು-
5فَجَعَلَهُ غُثَاءً أَحْوَىٰ
ತರುವಾಯ ಅವುಗಳನ್ನು ಕಪ್ಪು ಕಸಕಡ್ಡಿಗಳಾಗಿ ಮಾಡಿಬಿಟ್ಟನು.
6سَنُقْرِئُكَ فَلَا تَنْسَىٰ
ನಾವು ನಿಮಗೆ ಓದಿಸಿ ಬಿಡುವೆವು. ಆ ಬಳಿಕ ನೀವು ಮರೆತುಬಿಡಲಾರಿರಿ-
7إِلَّا مَا شَاءَ اللَّهُ ۚ إِنَّهُ يَعْلَمُ الْجَهْرَ وَمَا يَخْفَىٰ
ಅಲ್ಲಾಹನು ಇಚ್ಛಿಸಿದ್ದರ ಹೊರತು. ಅವನು ವ್ಯಕ್ತವಾಗಿರುವುದನ್ನೂ ಗುಪ್ತ ವಾಗಿರುವುದನ್ನೂ ಬಲ್ಲನು.
8وَنُيَسِّرُكَ لِلْيُسْرَىٰ
ನಾವು ನಿಮಗೆ ಸರಳ ವಿಧಾನದ ಸೌಲಭ್ಯ ನೀಡುತ್ತೇವೆ.
9فَذَكِّرْ إِنْ نَفَعَتِ الذِّكْرَىٰ
ಆದುದರಿಂದ ಉಪದೇಶದಿಂದ ಪ್ರಯೋಜನವಾಗುವುದಿದ್ದರೆ ನೀವು ಉಪದೇಶ ನೀಡಿರಿ.
10سَيَذَّكَّرُ مَنْ يَخْشَىٰ
ಭಯಭಕ್ತಿಯುಳ್ಳವನು ಉಪದೇಶವನ್ನು ಸ್ವೀಕರಿಸಿಕೊಳ್ಳುವನು-