1 وَالسَّمَاءِ وَالطَّارِقِ
ಆಕಾಶದಾಣೆ ಮತ್ತು ರಾತ್ರಿಯಲ್ಲಿ ಕಾಣಿಸಿಕೊಳ್ಳುವ ವಸ್ತುವಿನಾಣೆ-
2وَمَا أَدْرَاكَ مَا الطَّارِقُ
ರಾತ್ರಿ ಕಾಣಿಸಿಕೊಳ್ಳುವ ಆ ವಸ್ತುವೇನೆಂದು ನಿಮಗೇನು ಗೊತ್ತು?
3النَّجْمُ الثَّاقِبُ
ಮಿನುಗುವ ನಕ್ಷತ್ರ-
4إِنْ كُلُّ نَفْسٍ لَمَّا عَلَيْهَا حَافِظٌ
ಮೇಲ್ವಿಚಾರಕನಿಲ್ಲದಂತಹ ಜೀವವೊಂದೂ ಇಲ್ಲ.
5فَلْيَنْظُرِ الْإِنْسَانُ مِمَّ خُلِقَ
ಇನ್ನು ಮನುಷ್ಯನು, ತಾನು ಯಾವ ವಸ್ತುವಿನಿಂದ ಸೃಷ್ಟಿಸಲ್ಪಟ್ಟಿರುವೆನು ಎಂಬುದನ್ನಾದರೂ ಸ್ವಲ್ಪ ನೋಡಿಕೊಳ್ಳಲಿ.
6خُلِقَ مِنْ مَاءٍ دَافِقٍ
ಅವನು ಒಂದು ಚಿಮ್ಮುವ ದ್ರವದಿಂದ ಸೃಷ್ಟಿಸಲ್ಪಟ್ಟಿದ್ದಾನೆ-
7يَخْرُجُ مِنْ بَيْنِ الصُّلْبِ وَالتَّرَائِبِ
ಅದು ಬೆನ್ನು ಮತ್ತು ಎದೆಯ ಮೂಳೆಗಳ ನಡುವಿನಿಂದ ಹೊರಡುತ್ತದೆ.
8إِنَّهُ عَلَىٰ رَجْعِهِ لَقَادِرٌ
ಖಂಡಿತವಾಗಿಯೂ ಅವನು (ಆ ಸೃಷ್ಟಿಕರ್ತನು) ಅವನನ್ನು ಪುನಃ ಸೃಷ್ಟಿಸಲು ಶಕ್ತನು.
9يَوْمَ تُبْلَى السَّرَائِرُ
ಅಡಗಿದ್ದ ರಹಸ್ಯಗಳ ವಿಚಾರಣೆ ನಡೆಯಲಿರುವ ದಿನ.
10فَمَا لَهُ مِنْ قُوَّةٍ وَلَا نَاصِرٍ
ಅಂದು ಮಾನವನ ಬಳಿ ತನ್ನದಾದ ಯಾವ ಬಲವೂ ಇರಲಾರದು ಮತ್ತು ಅವನಿಗೆ ಯಾವ ಸಹಾಯಕನೂ ಇರಲಾರನು.