1 إِذَا السَّمَاءُ انْفَطَرَتْ
ಆಕಾಶವು ಒಡೆದು ಸೀಳಾಗುವಾಗ,
2وَإِذَا الْكَوَاكِبُ انْتَثَرَتْ
ನಕ್ಷತ್ರಗಳು ಚದರಿ ಹೋಗುವಾಗ,
3وَإِذَا الْبِحَارُ فُجِّرَتْ
ಸಮುದ್ರಗಳು ಭೇದಿಸಲ್ಪಡುವಾಗ-
4وَإِذَا الْقُبُورُ بُعْثِرَتْ
ಮತ್ತು ಸಮಾಧಿಗಳು ತೆರೆಯಲ್ಪಡುವಾಗ,
5عَلِمَتْ نَفْسٌ مَا قَدَّمَتْ وَأَخَّرَتْ
ಪ್ರತಿಯೊಬ್ಬ ವ್ಯಕ್ತಿಗೆ ತಾನು ಮುಂದೆ ಕಳುಹಿಸಿದ ಮತ್ತು ಹಿಂದೆ ಬಿಟ್ಟಿರುವ ಕರ್ಮಗಳೇನೆಂಬುದು ತಿಳಿದು ಬರುವುದು.
6يَا أَيُّهَا الْإِنْسَانُ مَا غَرَّكَ بِرَبِّكَ الْكَرِيمِ
ಓ ಮಾನವ! ಆ ನಿನ್ನ ಕರುಣಾಮಯಿ ಪ್ರಭುವಿನ ಬಗ್ಗೆ ನಿನ್ನನ್ನು ಮೋಸಕ್ಕೊಳಪಡಿಸಿದ ವಸ್ತು ಯಾವುದು?
7الَّذِي خَلَقَكَ فَسَوَّاكَ فَعَدَلَكَ
ಅವನು ನಿನ್ನನ್ನು ಸೃಷ್ಟಿಸಿದನು, ನಿನ್ನನ್ನು ನಖಶಿಖಾಂತ ಸರಿಪಡಿಸಿದನು, ನಿನ್ನನ್ನು ಸಂತುಲಿತಗೊಳಿಸಿದನು,
8فِي أَيِّ صُورَةٍ مَا شَاءَ رَكَّبَكَ
ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿ ರಚಿಸಿದನು.
9كَلَّا بَلْ تُكَذِّبُونَ بِالدِّينِ
ಖಂಡಿತ ಅಲ್ಲ, ವಾಸ್ತವದಲ್ಲಿ ನೀವು ಕರ್ಮಫಲವನ್ನು ಅಲ್ಲಗಳೆಯುತ್ತೀರಿ-
10وَإِنَّ عَلَيْكُمْ لَحَافِظِينَ
ವಸ್ತುತಃ ನಿಮ್ಮ ಮೇಲೆ ಕಾವಲುಗಾರರು ನಿಯುಕ್ತರಾಗಿರುವರು-