1 يَا أَيُّهَا الْمُدَّثِّرُ
ಹೊದ್ದು ಮಲಗುವವರೇ!
2قُمْ فَأَنْذِرْ
ಎದ್ದೇಳಿರಿ ಮತ್ತು ಎಚ್ಚರಿಸಿರಿ-
3وَرَبَّكَ فَكَبِّرْ
ಮತ್ತು ನಿಮ್ಮ ಪ್ರಭುವಿನ ಹಿರಿಮೆಯನ್ನು ಘೋಷಿಸಿರಿ-
4وَثِيَابَكَ فَطَهِّرْ
ಮತ್ತು ನಿಮ್ಮ ವಸ್ತ್ರಗಳನ್ನು ಶುಚಿಯಾಗಿರಿಸಿರಿ-
5وَالرُّجْزَ فَاهْجُرْ
ಮತ್ತು ಮಾಲಿನ್ಯದಿಂದ ದೂರವಿರಿ.
6وَلَا تَمْنُنْ تَسْتَكْثِرُ
ಹೆಚ್ಚು ಪಡೆಯಲಿಕ್ಕಾಗಿ ಉಪಕಾರ ಮಾಡಬೇಡಿರಿ-
7وَلِرَبِّكَ فَاصْبِرْ
ಮತ್ತು ನಿಮ್ಮ ಪ್ರಭುವಿಗಾಗಿ ತಾಳ್ಮೆ ವಹಿಸಿರಿ.
8فَإِذَا نُقِرَ فِي النَّاقُورِ
ಕಹಳೆ ಊದಲ್ಪಡುವಾಗ,
9فَذَٰلِكَ يَوْمَئِذٍ يَوْمٌ عَسِيرٌ
ಆ ದಿನವು ಅತ್ಯಂತ ಕಠಿಣ ದಿನವಾಗಿರುವುದು-
10عَلَى الْكَافِرِينَ غَيْرُ يَسِيرٍ
ಸತ್ಯನಿಷೇಧಿಗಳಿಗೆ ಅದು ಲಘುವಾಗಿರಲಾರದು.