1 يَا أَيُّهَا الْمُزَّمِّلُ
ಹೊದ್ದು ಮಲಗುವವರೇ,
2قُمِ اللَّيْلَ إِلَّا قَلِيلًا
ಸ್ವಲ್ಪ ಹೊತ್ತು ಹೊರತುಪಡಿಸಿ ರಾತ್ರಿ ವೇಳೆ ನಮಾಝಿಗಾಗಿ ನಿಲ್ಲಿರಿ-
3نِصْفَهُ أَوِ انْقُصْ مِنْهُ قَلِيلًا
ರಾತ್ರಿಯ ಅರ್ಧಭಾಗ ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಮಾಡಿಕೊಳ್ಳಿರಿ-
4أَوْ زِدْ عَلَيْهِ وَرَتِّلِ الْقُرْآنَ تَرْتِيلًا
ಅಥವಾ ಅದಕ್ಕಿಂತ ತುಸು ಹೆಚ್ಚಿಸಿಕೊಳ್ಳಿರಿ ಮತ್ತು ಕುರ್ ಆನನ್ನು ಸರಿಯಾಗಿ, ತಡೆ ತಡೆದು ಪಠಿಸಿರಿ.
5إِنَّا سَنُلْقِي عَلَيْكَ قَوْلًا ثَقِيلًا
ನಾವು ನಿಮ್ಮ ಮೇಲೆ ಒಂದು ಘನವಾದ ವಾಣಿಯನ್ನು ಅವತೀರ್ಣಗೊಳಿಸಲಿದ್ದೇವೆ.
6إِنَّ نَاشِئَةَ اللَّيْلِ هِيَ أَشَدُّ وَطْئًا وَأَقْوَمُ قِيلًا
ವಾಸ್ತವದಲ್ಲಿ ರಾತ್ರಿಕಾಲದ ಏಳುವಿಕೆಯು ಆತ್ಮ ನಿಯಂತ್ರಣದ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿದೆ ಮತ್ತು ಕುರ್ ಆನನ್ನು ಸರಿ ಯಾಗಿ ಪಠಿಸುವುದಕ್ಕೆ ಹೆಚ್ಚು ಯೋಗ್ಯವಾಗಿದೆ.
7إِنَّ لَكَ فِي النَّهَارِ سَبْحًا طَوِيلًا
ಹಗಲು ಹೊತ್ತಿನಲ್ಲಂತು ನಿಮಗೆ ಅನೇಕ ಕೆಲಸ ಕಾರ್ಯಗಳಿರುತ್ತವೆ.
8وَاذْكُرِ اسْمَ رَبِّكَ وَتَبَتَّلْ إِلَيْهِ تَبْتِيلًا
ನಿಮ್ಮ ಪ್ರಭುವಿನ ನಾಮವನ್ನು ಸ್ಮರಿಸುತ್ತಲಿರಿ ಮತ್ತು ಎಲ್ಲರಿಂದಲೂ ಬೇರ್ಪಟ್ಟು ಕೇವಲ ಅವನಿಗೆ ಸೇರಿದವರಾಗಿರಿ.
9رَبُّ الْمَشْرِقِ وَالْمَغْرِبِ لَا إِلَٰهَ إِلَّا هُوَ فَاتَّخِذْهُ وَكِيلًا
ಅವನು ಪೂರ್ವ-ಪಶ್ಚಿಮಗಳ ಒಡೆಯನು. ಅವನ ಹೊರತು ಇನ್ನಾವ ಆರಾಧ್ಯನೂ ಇಲ್ಲ. ಆದುದರಿಂದ ಅವನನ್ನೇ ನಿಮ್ಮ ಕಾರ್ಯಸಾಧಕನಾಗಿ ಮಾಡಿಕೊಳ್ಳಿರಿ.
10وَاصْبِرْ عَلَىٰ مَا يَقُولُونَ وَاهْجُرْهُمْ هَجْرًا جَمِيلًا
ಮತ್ತು ಜನರು ಆಡುತ್ತಿರುವ ಮಾತುಗಳ ಬಗ್ಗೆ ತಾಳ್ಮೆ ವಹಿಸಿರಿ ಮತ್ತು ಸಭ್ಯ ರೀತಿಯಲ್ಲಿ ಅವರಿಂದ ಬೇರ್ಪಡಿರಿ.