1 المص

ಅಲಿಫ್ ಲಾಮೀಮ್ ಸ್ವಾದ್.


2كِتَابٌ أُنْزِلَ إِلَيْكَ فَلَا يَكُنْ فِي صَدْرِكَ حَرَجٌ مِنْهُ لِتُنْذِرَ بِهِ وَذِكْرَىٰ لِلْمُؤْمِنِينَ

ಇದು ನಿಮಗೆ ಅವತೀರ್ಣಗೊಳಿಸಲಾಗಿರುವ ಗ್ರಂಥ. ಆದುದರಿಂದ ಓ ಮುಹಮ್ಮದರೇ, ಇದರಿಂದ ನಿಮ್ಮ ಹೃದಯದಲ್ಲಿ ಅಳುಕುಂಟಾಗದಿರಲಿ. ಇದನ್ನು ಅವತೀರ್ಣಗೊಳಿಸುವ ಉದ್ದೇಶವು ನೀವು ಇದರ ಮೂಲಕ (ನಿಷೇಧಿಗಳಿಗೆ) ಎಚ್ಚರಿಕೆ ನೀಡಬೇಕು ಮತ್ತು ವಿಶ್ವಾಸಿಗಳಿಗೆ ಉಪದೇಶ ನೀಡಬೇಕು ಎಂಬುದಾಗಿರುತ್ತದೆ.


3اتَّبِعُوا مَا أُنْزِلَ إِلَيْكُمْ مِنْ رَبِّكُمْ وَلَا تَتَّبِعُوا مِنْ دُونِهِ أَوْلِيَاءَ ۗ قَلِيلًا مَا تَذَكَّرُونَ

ಹೇ ಜನರೇ, ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಳಿಸಲ್ಪಟ್ಟಿರುವುದನ್ನೆಲ್ಲ ಅನುಸರಿಸಿರಿ ಮತ್ತು ನಿಮ್ಮ ಪಾಲಕ ಪ್ರಭುವನ್ನು ಬಿಟ್ಟು ಇತರ ಸಂರಕ್ಷಕರನ್ನು ಅನುಸರಿಸಬೇಡಿರಿ. ಆದರೆ ನೀವು ಉಪದೇಶವನ್ನು ಸ್ವಲ್ಪವೇ ಸ್ವೀಕರಿಸುತ್ತೀರಿ.


4وَكَمْ مِنْ قَرْيَةٍ أَهْلَكْنَاهَا فَجَاءَهَا بَأْسُنَا بَيَاتًا أَوْ هُمْ قَائِلُونَ

ಎಷ್ಟೋ ನಾಡುಗಳನ್ನು ನಾವು ನೆಲಸಮ ಮಾಡಿ ಬಿಟ್ಟೆವು. ಅವುಗಳ ಮೇಲೆ ನಮ್ಮ ಯಾತನೆಯು ಹಠಾತ್ತನೆ ರಾತ್ರೆಯ ವೇಳೆ ಅಥವಾ ಅವರು ಹಾಡುಹಗಲಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾಗ ಎರಗಿತು.


5فَمَا كَانَ دَعْوَاهُمْ إِذْ جَاءَهُمْ بَأْسُنَا إِلَّا أَنْ قَالُوا إِنَّا كُنَّا ظَالِمِينَ

ನಮ್ಮ ಯಾತನೆ ಅವರ ಮೇಲೆ ಎರಗಿದಾಗ ಅವರ ಬಾಯಲ್ಲಿ "ನಿಜವಾಗಿಯೂ ನಾವು ಅಕ್ರಮಿಗಳಾಗಿದ್ದೆವು" ಎಂದಲ್ಲದೆ ಇನ್ನಾವ ಸ್ವರವೂ ಇರಲಿಲ್ಲ.


6فَلَنَسْأَلَنَّ الَّذِينَ أُرْسِلَ إِلَيْهِمْ وَلَنَسْأَلَنَّ الْمُرْسَلِينَ

ಆದ್ದರಿಂದ ನಾವು ಯಾರ ಕಡೆಗೆ ಸಂದೇಶವಾಹಕರನ್ನು ಕಳುಹಿಸಿದ್ದೆವೋ ಅವರನ್ನೆಲ್ಲಾ ವಿಚಾರಣೆ ನಡೆಸಿಯೇ ತೀರುವೆವು. ಮತ್ತು (ಸಂದೇಶವಾಹಕರು ಕಾರ್ಯಭಾರವನ್ನು ಎಷ್ಟರ ಮಟ್ಟಿಗೆ ನೆರವೇರಿಸಿದ್ದರು ಮತ್ತು ಅವರಿಗೆ ಏನು ಪ್ರತಿಕ್ರಿಯೆ ದೊರಕಿತೆಂದು) ಸಂದೇಶವಾಹಕರೊಡನೆಯೂ ನಾವು ಪ್ರಶ್ನಿಸುವೆವು.


7فَلَنَقُصَّنَّ عَلَيْهِمْ بِعِلْمٍ ۖ وَمَا كُنَّا غَائِبِينَ

ಆಗ ನಾವು ಸ್ವತಃ ಸಂಪೂರ್ಣ ಜ್ಞಾನದೊಂದಿಗೆ ಸಕಲ ಫಟನೆಗಳನ್ನು ಅವರ ಮುಂದಿಡುವೆವು. ನಾವೆಂದೂ ಅಡಗಿರಲಿಲ್ಲವಷ್ಟೆ.


8وَالْوَزْنُ يَوْمَئِذٍ الْحَقُّ ۚ فَمَنْ ثَقُلَتْ مَوَازِينُهُ فَأُولَٰئِكَ هُمُ الْمُفْلِحُونَ

ತೂಕವು ಅಂದು ಸಾಕ್ಷಾತ್ ಸತ್ಯವಾಗಿರುವುದು. ಯಾರ ತೂಗುತಟ್ಟೆಯು ಭಾರವಾಗಿರು ವುದೋ ಅವರೇ ಸಾರ್ಥಕ್ಯ ಹೊಂದುವವರಾಗುವರು.


9وَمَنْ خَفَّتْ مَوَازِينُهُ فَأُولَٰئِكَ الَّذِينَ خَسِرُوا أَنْفُسَهُمْ بِمَا كَانُوا بِآيَاتِنَا يَظْلِمُونَ

ಮತ್ತು ಯಾರ ತೂಗುತಟ್ಟೆಯು ಹಗುರವಾಗಿರುವುದೋ ಅವರೇಸ್ವಯಂ ತಮ್ಮನ್ನು ನಷ್ಟಕ್ಕೊಳಪಡಿಸಿಕೊಂಡವರಾಗುವರು. ಏಕೆಂದರೆ ಅವರು ನಮ್ಮ ನಿದರ್ಶನಗಳ ಬಗ್ಗೆ ಅನ್ಯಾಯ ನೀತಿಯನ್ನನುಸರಿಸುತ್ತಿದ್ದರು.


10وَلَقَدْ مَكَّنَّاكُمْ فِي الْأَرْضِ وَجَعَلْنَا لَكُمْ فِيهَا مَعَايِشَ ۗ قَلِيلًا مَا تَشْكُرُونَ

ನಾವು ನಿಮ್ಮನ್ನು ಜಗತ್ತಿನಲ್ಲಿ ಸಾಮರ್ಥ್ಯ ಕೊಟ್ಟು ನೆಲೆಗೊಳಿಸಿದೆವು ಮತ್ತು ಇಲ್ಲಿ ನಿಮಗೆ ಜೀವನ ಸಾಧನಗಳನ್ನು ಒದಗಿಸಿದೆವು. ಆದರೆ ನೀವು ಅತ್ಯಲ್ಪವೇ ಕೃತಜ್ಞ ರಾಗಿರುತ್ತೀರಿ.