1 يَا أَيُّهَا النَّبِيُّ لِمَ تُحَرِّمُ مَا أَحَلَّ اللَّهُ لَكَ ۖ تَبْتَغِي مَرْضَاتَ أَزْوَاجِكَ ۚ وَاللَّهُ غَفُورٌ رَحِيمٌ

ಸಂದೇಶವಾಹಕರೇ, ಅಲ್ಲಾಹನು ನಿಮಗೆ 'ಧರ್ಮಸಮ್ಮತ'ಗೊಳಿಸಿರುವ ವಸ್ತುವನ್ನು ನೀವೇಕೆ ನಿಷಿದ್ಧಗೊಳಿಸುತ್ತೀರಿ? ನೀವು ನಿಮ್ಮ ಪತ್ನಿಯರ ಮೆಚ್ಚುಗೆಯನ್ನು ಬಯಸುತ್ತೀರಿ(ಎಂಬ ಕಾರಣ ದಿಂದಲೇ?) ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.


2قَدْ فَرَضَ اللَّهُ لَكُمْ تَحِلَّةَ أَيْمَانِكُمْ ۚ وَاللَّهُ مَوْلَاكُمْ ۖ وَهُوَ الْعَلِيمُ الْحَكِيمُ

ಅಲ್ಲಾಹನು ನಿಮಗೆ ನೀವು ಹಾಕಿದ ಆಣೆಗಳ ಪಾಲನೆಯಿಂದ ಮುಕ್ತರಾಗುವ ಕ್ರಮವನ್ನು ನಿಶ್ಚಯಿಸಿರುತ್ತಾನೆ. ಅಲ್ಲಾಹನು ನಿಮ್ಮ ಸಂರಕ್ಷಕನು ಮತ್ತು ಅವನೇ ಸರ್ವಜ್ಞನೂ ಯುಕ್ತಿ ಪೂರ್ಣನೂ ಆಗಿರುತ್ತಾನೆ.


3وَإِذْ أَسَرَّ النَّبِيُّ إِلَىٰ بَعْضِ أَزْوَاجِهِ حَدِيثًا فَلَمَّا نَبَّأَتْ بِهِ وَأَظْهَرَهُ اللَّهُ عَلَيْهِ عَرَّفَ بَعْضَهُ وَأَعْرَضَ عَنْ بَعْضٍ ۖ فَلَمَّا نَبَّأَهَا بِهِ قَالَتْ مَنْ أَنْبَأَكَ هَٰذَا ۖ قَالَ نَبَّأَنِيَ الْعَلِيمُ الْخَب

(ಮತ್ತು ಈ ವಿಷಯವೂ ಗಮನಾರ್ಹವಾಗಿದೆ) ಪ್ರವಾದಿಯು ತಮ್ಮ ಓರ್ವ ಪತ್ನಿಯೊಡನೆ ಒಂದು ಮಾತನ್ನು ರಹಸ್ಯವಾಗಿ ಹೇಳಿದ್ದರು. ತರುವಾಯ ಆ ಪತ್ನಿಯು (ಇನ್ನೊಬ್ಬರಿಗೆ) ಈ ರಹಸ್ಯವನ್ನು ಬಯಲುಗೊಳಿಸಿ ಬಿಟ್ಟಾಗ ಮತ್ತು ಅಲ್ಲಾಹನು ಪ್ರವಾದಿಗೆ ಈ (ರಹಸ್ಯವನ್ನು ಬಯಲುಗೊಳಿಸಿದ) ಸುದ್ದಿಯನ್ನು ತಿಳಿಸಿದಾಗ, ಅವರು ಅದರ ಸ್ವಲ್ಪಾಂಶವನ್ನು (ಆ ಪತ್ನಿಗೆ) ತಿಳಿಸಿದರು ಮತ್ತು ಸ್ವಲ್ಪಾಂಶವನ್ನು ಕಡೆಗಣಿಸಿದರು. ತರುವಾಯ ಪ್ರವಾದಿಯವರು ಅವರಿಗೆ ಆ (ರಹಸ್ಯವನ್ನು ಬಯಲುಗೊಳಿಸಿದ) ಸುದ್ದಿಯನ್ನು ತಿಳಿಸಿದಾಗ ಅವರು, "ನಿಮಗೆ ಈ ಸುದ್ದಿ ಕೊಟ್ಟವರಾರು?" ಎಂದು ಕೇಳಿದರು. ಪ್ರವಾದಿಯವರು, "ನನಗೆ ಸರ್ವಜ್ಞನೂ ವಿವರಪೂರ್ಣನೂ ಆಗಿರುವವನು ಸುದ್ದಿ ತಿಳಿಸಿದನು" ಎಂದರು.


4إِنْ تَتُوبَا إِلَى اللَّهِ فَقَدْ صَغَتْ قُلُوبُكُمَا ۖ وَإِنْ تَظَاهَرَا عَلَيْهِ فَإِنَّ اللَّهَ هُوَ مَوْلَاهُ وَجِبْرِيلُ وَصَالِحُ الْمُؤْمِنِينَ ۖ وَالْمَلَائِكَةُ بَعْدَ ذَٰلِكَ ظَهِيرٌ

ನೀವಿಬ್ಬರೂ ಅಲ್ಲಾಹನೊಡನೆ ಪಶ್ಚಾತ್ತಾಪ ಪಡುತ್ತೀರಾದರೆ (ಇದು ನಿಮ್ಮ ಪಾಲಿಗೆ ಉತ್ತಮವಾಗಿದೆ). ಏಕೆಂದರೆ, ನಿಮ್ಮ ಹೃದಯಗಳು ನೇರ ಮಾರ್ಗದಿಂದ ಸರಿದು ಹೋಗಿವೆ ಮತ್ತು ನೀವು ಪ್ರವಾದಿಯ ವಿರುದ್ಧ ಗುಂಪುಗಾರಿಕೆ ನಡೆಸಿದರೆ, ಅಲ್ಲಾಹನು ಅವರ ಸಂರಕ್ಷಕನಾಗಿದ್ದಾನೆ ಮತ್ತು ಅವನ ನಂತರ ಜಿಬ್ರೀಲರು, ಎಲ್ಲ ಸಜ್ಜನ ಸತ್ಯವಿಶ್ವಾಸಿಗಳು ಮತ್ತು ಎಲ್ಲ ದೇವಚರರು ಅವರ ಸಂಗಾತಿಗಳೂ ಸಹಾಯಕರೂ ಆಗಿರುವರೆಂಬುದು ನಿಮಗೆ ತಿಳಿದಿರಲಿ.


5عَسَىٰ رَبُّهُ إِنْ طَلَّقَكُنَّ أَنْ يُبْدِلَهُ أَزْوَاجًا خَيْرًا مِنْكُنَّ مُسْلِمَاتٍ مُؤْمِنَاتٍ قَانِتَاتٍ تَائِبَاتٍ عَابِدَاتٍ سَائِحَاتٍ ثَيِّبَاتٍ وَأَبْكَارًا

ಪ್ರವಾದಿಯು ನಿಮಗೆಲ್ಲರಿಗೂ ತಲಾಕ್ ನೀಡಿದರೆ ಅಲ್ಲಾಹನು ಅವರಿಗೆ ನಿಮ್ಮ ಬದಲಿಗೆ ನಿಮಗಿಂತ ಉತ್ತಮರೂ ನೈಜ ಮುಸ್ಲಿಮರೂ ಸತ್ಯವಿಶ್ವಾಸವುಳ್ಳವರೂ ವಿಧೇಯರೂ ತೌಬಾ ಮಾಡುವವರೂ ಆರಾಧನಾಶೀಲೆಯರೂ ಉಪವಾಸ ವ್ರತ ಆಚರಿಸುವವರೂ ಆದ- ಹಿಂದೆ ವಿವಾಹವಾಗಿದ್ದ ಅಥವಾ ಕುಮಾರಿಯಾಗಿರುವ ಪತ್ನಿಯರನ್ನು ದಯಪಾಲಿಸಬಹುದು.


6يَا أَيُّهَا الَّذِينَ آمَنُوا قُوا أَنْفُسَكُمْ وَأَهْلِيكُمْ نَارًا وَقُودُهَا النَّاسُ وَالْحِجَارَةُ عَلَيْهَا مَلَائِكَةٌ غِلَاظٌ شِدَادٌ لَا يَعْصُونَ اللَّهَ مَا أَمَرَهُمْ وَيَفْعَلُونَ مَا يُؤْمَرُونَ

ಸತ್ಯವಿಶ್ವಾಸಿಗಳೇ, ಮಾನವರೂ ಶಿಲೆಗಳೂ ಇಂಧನವಾಗಲಿರುವ ಅಗ್ನಿಯಿಂದ ನಿಮ್ಮನ್ನೂ ನಿಮ್ಮ ಕುಟುಂಬದವರನ್ನೂ ರಕ್ಷಿಸಿ ಕೊಳ್ಳಿರಿ. ಅದರ ಮೇಲೆ ಅತ್ಯಂತ ಕಠೋರ ಮತ್ತು ಉಗ್ರರಾದ ದೇವಚರರು ನಿಯುಕ್ತರಾಗುವರು. ಅವರೆಂದೂ ಅಲ್ಲಾಹನ ಆಜ್ಞೋಲ್ಲಂಘನೆ ಮಾಡುವುದಿಲ್ಲ ಮತ್ತು ಅವರಿಗೆ ನೀಡಲಾಗುವ ಪ್ರತಿಯೊಂದು ಅಪ್ಪಣೆಯನ್ನೂ ಪಾಲಿಸುತ್ತಾರೆ.


7يَا أَيُّهَا الَّذِينَ كَفَرُوا لَا تَعْتَذِرُوا الْيَوْمَ ۖ إِنَّمَا تُجْزَوْنَ مَا كُنْتُمْ تَعْمَلُونَ

(ಆಗ ಹೇಳಲಾಗುವುದು;) "ಸತ್ಯನಿಷೇಧಿಗಳೇ, ಇಂದು ನೆಪಗಳನ್ನೊಡ್ಡಬೇಡಿರಿ; ನಿಮಗೆ ನೀವು ಮಾಡುತ್ತಿದ್ದ ಕರ್ಮಗಳಿಗೆ ತಕ್ಕು ದಾದ ಪ್ರತಿಫಲವನ್ನೇ ನೀಡಲಾಗುತ್ತಿದೆ."


8يَا أَيُّهَا الَّذِينَ آمَنُوا تُوبُوا إِلَى اللَّهِ تَوْبَةً نَصُوحًا عَسَىٰ رَبُّكُمْ أَنْ يُكَفِّرَ عَنْكُمْ سَيِّئَاتِكُمْ وَيُدْخِلَكُمْ جَنَّاتٍ تَجْرِي مِنْ تَحْتِهَا الْأَنْهَارُ يَوْمَ لَا يُخْزِي اللَّهُ النَّبِيَّ وَالَّذِينَ آمَنُوا مَعَه

ಸತ್ಯವಿಶ್ವಾಸಿಗಳೇ, ಅಲ್ಲಾಹನೊಡನೆ ಪಶ್ಚಾತ್ತಾಪ ಪಡಿರಿ. ನಿಷ್ಕಳಂಕವಾದ ಪಶ್ಚಾತ್ತಾಪ, ನಿಮ್ಮ ಪ್ರಭು ನಿಮ್ಮ ದೋಷಗಳನ್ನು ಅಳಿಸಬಹುದು ಮತ್ತು ನಿಮ್ಮನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸಲೂ ಬಹುದು. ಅದು ಅಲ್ಲಾಹನು ತನ್ನ ಪ್ರವಾದಿಯನ್ನಾಗಲಿ, ಅವರೊಂದಿಗೆ ವಿಶ್ವಾಸವಿರಿಸಿದ ಜನರನ್ನಾಗಲಿ ಅವಮಾನಗೊಳಿಸದಂತಹ ದಿನವಾಗಿರುವುದು. ಅವರ ಜ್ಯೋತಿಯು ಅವರ ಮುಂದಿ ನಿಂದಲೂ ಅವರ ಬಲಬದಿಯಲ್ಲೂ ಚಲಿಸುತ್ತಿರುವುದು ಮತ್ತು ಅವರು, "ನಮ್ಮ ಪ್ರಭು, ನಮ್ಮ ಜ್ಯೋತಿಯನ್ನು ನಮಗಾಗಿ ಪರಿಪೂರ್ಣಗೊಳಿಸಿಬಿಡು ಮತ್ತು ನಮ್ಮನ್ನು ಕ್ಷಮಿಸು, ನೀನು ಸಕಲ ವಿಷಯಗಳ ಸಾಮಥ್ರ್ಯವಿರುವವನಾಗಿರುತ್ತಿ" ಎಂದು ಹೇಳುತ್ತಿರುವರು.


9يَا أَيُّهَا النَّبِيُّ جَاهِدِ الْكُفَّارَ وَالْمُنَافِقِينَ وَاغْلُظْ عَلَيْهِمْ ۚ وَمَأْوَاهُمْ جَهَنَّمُ ۖ وَبِئْسَ الْمَصِيرُ

ಸಂದೇಶವಾಹಕರೇ, ಸತ್ಯನಿಷೇಧಿಗಳೊಂದಿಗೂ ಕಪಟವಿಶ್ವಾಸಿಗಳೊಂದಿಗೂ ಸಮರ ಹೂಡಿರಿ ಮತ್ತು ಅವರೊಡನೆ ಕಠಿಣವಾಗಿ ವರ್ತಿಸಿರಿ. ನರಕವೇ ಅವರ ನಿವಾಸವಾಗಿದೆ ಮತ್ತು ಅದು ಅತ್ಯಂತ ಕೆಟ್ಟ ನೆಲೆಯಾಗಿದೆ.


10ضَرَبَ اللَّهُ مَثَلًا لِلَّذِينَ كَفَرُوا امْرَأَتَ نُوحٍ وَامْرَأَتَ لُوطٍ ۖ كَانَتَا تَحْتَ عَبْدَيْنِ مِنْ عِبَادِنَا صَالِحَيْنِ فَخَانَتَاهُمَا فَلَمْ يُغْنِيَا عَنْهُمَا مِنَ اللَّهِ شَيْئًا وَقِيلَ ادْخُلَا النَّارَ مَعَ الدَّاخِلِينَ

ಅಲ್ಲಾಹನು ಸತ್ಯನಿಷೇಧಿಗಳ ವಿಷಯದಲ್ಲಿ ನೂಹ್ ಮತ್ತು ಲೂತರ ಪತ್ನಿಯರನ್ನು ಉದಾಹರಣೆಯಾಗಿ ಮುಂದಿಡುತ್ತಾನೆ. ಅವರು ನಮ್ಮ ಇಬ್ಬರು ಸಜ್ಜನ ದಾಸರ ದಾಂಪತ್ಯ ಬಂಧನದಲ್ಲಿದ್ದರು. ಆದರೆ, ಅವರು ತಮ್ಮ ಆ ಪತಿಯರನ್ನು ವಂಚಿಸಿದರು ಮತ್ತು ಅವರು (ಪತಿಯಂದಿರು) ಅಲ್ಲಾಹನೆದುರು ಅವರಿಗೆ ಯಾವ ಪ್ರಯೋಜನವನ್ನೂ ಒದಗಿಸದಾದರು. ಇಬ್ಬರೊಡನೆಯೂ, "ಹೋಗಿರಿ, ಅಗ್ನಿಯಲ್ಲಿ ಬೀಳುವವರ ಜೊತೆಗೆ ನೀವೂ ಬೀಳಿರಿ" ಎಂದು ಹೇಳಲಾಯಿತು.