1 إِذَا جَاءَكَ الْمُنَافِقُونَ قَالُوا نَشْهَدُ إِنَّكَ لَرَسُولُ اللَّهِ ۗ وَاللَّهُ يَعْلَمُ إِنَّكَ لَرَسُولُهُ وَاللَّهُ يَشْهَدُ إِنَّ الْمُنَافِقِينَ لَكَاذِبُونَ

ಸಂದೇಶವಾಹಕರೇ, ಕಪಟವಿಶ್ವಾಸಿಗಳು ನಿಮ್ಮ ಬಳಿಗೆ ಬಂದಾಗ, "ತಾವು ಖಂಡಿತ ಅಲ್ಲಾಹನ ಸಂದೇಶವಾಹಕರೆಂದು ನಾವು ಸಾಕ್ಷ್ಯ ವಹಿಸುತ್ತೇವೆ" ಎಂದು ಹೇಳುತ್ತಾರೆ. ನೀವು ಖಂಡಿತ ವಾಗಿಯೂ ಅಲ್ಲಾಹನ ಸಂದೇಶವಾಹಕರೆಂದು ಅಲ್ಲಾಹನಿಗೆ ತಿಳಿದಿದೆ. ಆದರೆ ಈ ಕಪಟವಿಶ್ವಾಸಿಗಳು ಮಹಾ ಸುಳ್ಳುಗಾರರೆಂದು ಅಲ್ಲಾಹನು ಸಾಕ್ಷ್ಯ ವಹಿಸುತ್ತಾನೆ.


2اتَّخَذُوا أَيْمَانَهُمْ جُنَّةً فَصَدُّوا عَنْ سَبِيلِ اللَّهِ ۚ إِنَّهُمْ سَاءَ مَا كَانُوا يَعْمَلُونَ

ಇವರು ತಮ್ಮ ಪ್ರತಿಜ್ಞೆಗಳನ್ನು ಗುರಾಣಿಗಳಾಗಿ ಮಾಡಿಕೊಂಡಿದ್ದಾರೆ.ಈ ರೀತಿಯಲ್ಲಿ ಇವರು ಸ್ವತಃ ಅಲ್ಲಾಹನ ಮಾರ್ಗದಿಂದ ತಡೆದು ನಿಲ್ಲುತ್ತಾರೆ ಮತ್ತು ಇತರರನ್ನೂ ತಡೆಯುತ್ತಾರೆ. ಇವರು ಮಾಡುತ್ತಿರುವ ಕೃತ್ಯಗಳು ಎಷ್ಟು ಕೆಟ್ಟವು!


3ذَٰلِكَ بِأَنَّهُمْ آمَنُوا ثُمَّ كَفَرُوا فَطُبِعَ عَلَىٰ قُلُوبِهِمْ فَهُمْ لَا يَفْقَهُونَ

ಇವರು ಸತ್ಯದ ಮೇಲೆ ವಿಶ್ವಾಸವಿರಿಸಿ ಆ ಬಳಿಕ ನಿರಾಕರಿಸಿದ್ದರಿಂದ ಹೀಗೆಲ್ಲ ಆಯಿತು. ಆದುದರಿಂದ ಇವರ ಹೃದಯಗಳಿಗೆ ಮುದ್ರೆ ಹಾಕಿ ಬಿಡಲಾಯಿತು. ಇನ್ನು ಇವರು ಏನನ್ನೂ ಗ್ರಹಿಸುವುದಿಲ್ಲ.


4وَإِذَا رَأَيْتَهُمْ تُعْجِبُكَ أَجْسَامُهُمْ ۖ وَإِنْ يَقُولُوا تَسْمَعْ لِقَوْلِهِمْ ۖ كَأَنَّهُمْ خُشُبٌ مُسَنَّدَةٌ ۖ يَحْسَبُونَ كُلَّ صَيْحَةٍ عَلَيْهِمْ ۚ هُمُ الْعَدُوُّ فَاحْذَرْهُمْ ۚ قَاتَلَهُمُ اللَّهُ ۖ أَنَّىٰ يُؤْفَكُونَ

ಇವರನ್ನು ನೋಡಿದರೆ ನಿಮಗೆ ಇವರ ಶರೀರವು ಬಹಳ ವೈಭವ ಪೂರ್ಣವಾಗಿ ಕಾಣಿಸುವುದು. ಇವರು ಮಾತನಾಡಿದರೆ ನೀವು ಇವರ ಮಾತನ್ನು ಕೇಳುತ್ತಲೇ ಇದ್ದು ಬಿಡುವಿರಿ. ಆದರೆ ವಾಸ್ತವದಲ್ಲಿ ಇವರು ಗೋಡೆಗೆ ಒರಗಿಸಿಡಲ್ಪಟ್ಟಿರುವ ಮರದ ಕೊರಡುಗಳಂತಿದ್ದಾರೆ. ಇವರು ಪ್ರತಿಯೊಂದು ಉಚ್ಚ ಸ್ವರವನ್ನು ತಮ್ಮ ವಿರುದ್ಧವೆಂದು ಭಾವಿಸುತ್ತಾರೆ. ಇವರು ಅಪ್ಪಟ ಶತ್ರುಗಳು. ಇವರ ಬಗ್ಗೆ ಎಚ್ಚರವಾಗಿರಿ. ಇವರ ಮೇಲೆ ಅಲ್ಲಾಹನ ಶಾಪವಿದೆ. ಇವರು ಎಲ್ಲಿ ಅಲೆದಾಡಿಸಲ್ಪಡುತ್ತಿದ್ದಾರೆ?


5وَإِذَا قِيلَ لَهُمْ تَعَالَوْا يَسْتَغْفِرْ لَكُمْ رَسُولُ اللَّهِ لَوَّوْا رُءُوسَهُمْ وَرَأَيْتَهُمْ يَصُدُّونَ وَهُمْ مُسْتَكْبِرُونَ

ಅಲ್ಲಾಹನ ಸಂದೇಶವಾಹಕರು ನಿಮಗಾಗಿ ಕ್ಷಮಾಯಾಚನೆ ಮಾಡುವಂತಾಗಲು, ನೀವು ಬನ್ನಿರಿ ಎಂದು ಅವರೊಡನೆ ಹೇಳಲಾದಾಗ ಅವರು ತಲೆ ಕೊಡವಿಕೊಳ್ಳುತ್ತಾರೆ ಮತ್ತು ಅವರು ಬಹಳ ಅಹಂಕಾರದಿಂದ ಬಾರದಿರುವುದನ್ನು ನೀವು ಕಾಣುತ್ತೀರಿ.


6سَوَاءٌ عَلَيْهِمْ أَسْتَغْفَرْتَ لَهُمْ أَمْ لَمْ تَسْتَغْفِرْ لَهُمْ لَنْ يَغْفِرَ اللَّهُ لَهُمْ ۚ إِنَّ اللَّهَ لَا يَهْدِي الْقَوْمَ الْفَاسِقِينَ

ಸಂದೇಶವಾಹಕರೇ, ನೀವು ಅವರಿಗಾಗಿ ಕ್ಷಮಾಯಾಚನೆ ಮಾಡಿ ದರೂ ಮಾಡದಿದ್ದರೂ ಅವರ ಮಟ್ಟಿಗೆ ಒಂದೇ ಆಗಿದೆ. ಅಲ್ಲಾಹನು ಅವರನ್ನು ಎಂದಿಗೂ ಕ್ಷಮಿಸಲಾರನು. ಅಲ್ಲಾಹನು ಕರ್ಮಭ್ರಷ್ಟರಿಗೆ ಖಂಡಿತ ಸನ್ಮಾರ್ಗ ನೀಡುವುದಿಲ್ಲ.


7هُمُ الَّذِينَ يَقُولُونَ لَا تُنْفِقُوا عَلَىٰ مَنْ عِنْدَ رَسُولِ اللَّهِ حَتَّىٰ يَنْفَضُّوا ۗ وَلِلَّهِ خَزَائِنُ السَّمَاوَاتِ وَالْأَرْضِ وَلَٰكِنَّ الْمُنَافِقِينَ لَا يَفْقَهُونَ

ಸಂದೇಶವಾಹಕರ ಸಂಗಾತಿಗಳಿಗಾಗಿ ಖರ್ಚು ಮಾಡುವುದನ್ನು ನಿಲ್ಲಿಸಿ ಬಿಡಿರಿ; ಇವರು ಚದುರಿ ಹೋಗಲಿ- ಎಂದು ಹೇಳುವವರು ಇವರೇ. ವಸ್ತುತಃ ಭೂಮಿ-ಆಕಾಶಗಳ ಭಂಡಾರಗಳ ಒಡೆತನ ಅಲ್ಲಾಹನ ಕೈಯಲ್ಲಿದೆ. ಆದರೆ ಈ ಕಪಟವಿಶ್ವಾಸಿಗಳು ಗ್ರಹಿಸುವುದಿಲ್ಲ.


8يَقُولُونَ لَئِنْ رَجَعْنَا إِلَى الْمَدِينَةِ لَيُخْرِجَنَّ الْأَعَزُّ مِنْهَا الْأَذَلَّ ۚ وَلِلَّهِ الْعِزَّةُ وَلِرَسُولِهِ وَلِلْمُؤْمِنِينَ وَلَٰكِنَّ الْمُنَافِقِينَ لَا يَعْلَمُونَ

ನಾವು ಮದೀನಾಕ್ಕೆ ಹಿಂದಿರುಗಿದಾಗ ಗೌರವಾನ್ವಿತನು ನಿಂದ್ಯನನ್ನು ಅಲ್ಲಿಂದ ಹೊರಕ್ಕಟ್ಟಿ ಬಿಡುವನೆಂದು ಇವರು ಹೇಳುತ್ತಾರೆ. ವಾಸ್ತವದಲ್ಲಿ ಗೌರವವಂತೂ ಅಲ್ಲಾಹ್, ಅವನ ಸಂದೇಶವಾಹ ಕರು ಮತ್ತು ಸತ್ಯವಿಶ್ವಾಸಿಗಳಿಗಾಗಿಯೇ ಇದೆ. ಆದರೆ ಈ ಕಪಟ ವಿಶ್ವಾಸಿಗಳು ತಿಳಿಯುವುದಿಲ್ಲ.


9يَا أَيُّهَا الَّذِينَ آمَنُوا لَا تُلْهِكُمْ أَمْوَالُكُمْ وَلَا أَوْلَادُكُمْ عَنْ ذِكْرِ اللَّهِ ۚ وَمَنْ يَفْعَلْ ذَٰلِكَ فَأُولَٰئِكَ هُمُ الْخَاسِرُونَ

ಸತ್ಯವಿಶ್ವಾಸಿಗಳೇ, ನಿಮ್ಮ ಸಂಪತ್ತು ಮತ್ತು ನಿಮ್ಮ ಸಂತಾನಗಳು ನಿಮ್ಮನ್ನು ಅಲ್ಲಾಹನ ಸ್ಮರಣೆಯಿಂದ ಅಲಕ್ಷ್ಯಗೊಳಿಸದಿರಲಿ. ಹೀಗೆ ಮಾಡುವವರೇ ನಷ್ಟ ಅನುಭವಿಸುವವರು.


10وَأَنْفِقُوا مِنْ مَا رَزَقْنَاكُمْ مِنْ قَبْلِ أَنْ يَأْتِيَ أَحَدَكُمُ الْمَوْتُ فَيَقُولَ رَبِّ لَوْلَا أَخَّرْتَنِي إِلَىٰ أَجَلٍ قَرِيبٍ فَأَصَّدَّقَ وَأَكُنْ مِنَ الصَّالِحِينَ

ನಿಮ್ಮ ಪೈಕಿ ಯಾರದಾದರೂ ಮರಣದ ಸಮಯ ಬಂದಿದ್ದು ಆಗ ಅವನು- "ನನ್ನ ಪ್ರಭೂ ನೀನು ನನಗೆ ಇನ್ನೂ ಸ್ವಲ್ಪ ಹೆಚ್ಚು ಕಾಲಾವಧಿ ನೀಡಿರುವುದಿಲ್ಲವೇಕೆ? ಹಾಗೆ ನೀಡಿದ್ದರೆ ನಾನು ದಾನ-ಧರ್ಮ ಮಾಡುತ್ತಿದ್ದೆ ಮತ್ತು ಸಜ್ಜನರ ಸಾಲಿಗೆ ಸೇರುತ್ತಿದ್ದೆ"- ಎಂದು ಹೇಳುವುದಕ್ಕೆ ಮುಂಚೆ ನಾವು ನಿಮಗೆ ದಯಪಾಲಿಸಿರುವ ಸಂಪತ್ತಿನಿಂದ ಖರ್ಚು ಮಾಡಿರಿ.