1 يُسَبِّحُ لِلَّهِ مَا فِي السَّمَاوَاتِ وَمَا فِي الْأَرْضِ الْمَلِكِ الْقُدُّوسِ الْعَزِيزِ الْحَكِيمِ

ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವೂ ಅಲ್ಲಾಹನನ್ನು ಜಪಿಸುತ್ತಿದೆ. ಅತ್ಯಂತ ಪರಿಶುದ್ಧನೂ ಪ್ರಬಲನೂ ಯುಕ್ತಿಪೂರ್ಣನೂ ಆಗಿರುವ ಸಾಮ್ರಾಟನು.


2هُوَ الَّذِي بَعَثَ فِي الْأُمِّيِّينَ رَسُولًا مِنْهُمْ يَتْلُو عَلَيْهِمْ آيَاتِهِ وَيُزَكِّيهِمْ وَيُعَلِّمُهُمُ الْكِتَابَ وَالْحِكْمَةَ وَإِنْ كَانُوا مِنْ قَبْلُ لَفِي ضَلَالٍ مُبِينٍ

ಉಮ್ಮೀಗಳ(ನಿರಕ್ಷರಿಗಳ) ನಡುವೆ ಅವರಿಂದಲೇ ಒಬ್ಬ ಸಂದೇಶ ವಾಹಕರನ್ನು ಎಬ್ಬಿಸಿದವನು ಅವನೇ. ಅವರು ಆ ಜನರಿಗೆ ಅವನ ಸೂಕ್ತಗಳನ್ನು ಓದಿ ಹೇಳುತ್ತಾರೆ, ಅವರ ಜೀವನವನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥ ಹಾಗೂ ಸದ್ವಿವೇಕದ ಶಿಕ್ಷಣ ನೀಡುತ್ತಾರೆ. ವಸ್ತುತಃ ಇದಕ್ಕಿಂತ ಮುಂಚೆ ಅವರು ಸುಸ್ಪಷ್ಟ ಪಥಭ್ರಷ್ಟತೆಯಲ್ಲಿ ಬಿದ್ದಿದ್ದರು-


3وَآخَرِينَ مِنْهُمْ لَمَّا يَلْحَقُوا بِهِمْ ۚ وَهُوَ الْعَزِيزُ الْحَكِيمُ

ಮತ್ತು (ಇವರ ಸಂದೇಶವಾಹಕತ್ವವು) ಅವರನ್ನಿನ್ನೂ ಭೇಟಿಯಾಗಿರದ ಇತರ ಜನರಿಗೂ ಅನ್ವಯಿಸುತ್ತದೆ. ಅಲ್ಲಾಹನು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ.


4ذَٰلِكَ فَضْلُ اللَّهِ يُؤْتِيهِ مَنْ يَشَاءُ ۚ وَاللَّهُ ذُو الْفَضْلِ الْعَظِيمِ

ಇದು ಅವನ ಅನುಗ್ರಹ. ಇದನ್ನವನು, ತಾನಿಚ್ಛಿಸಿದವರಿಗೆ ನೀಡುತ್ತಾನೆ ಮತ್ತು ಅವನು ಮಹಾ ಅನುಗ್ರಹದಾನಿ.


5مَثَلُ الَّذِينَ حُمِّلُوا التَّوْرَاةَ ثُمَّ لَمْ يَحْمِلُوهَا كَمَثَلِ الْحِمَارِ يَحْمِلُ أَسْفَارًا ۚ بِئْسَ مَثَلُ الْقَوْمِ الَّذِينَ كَذَّبُوا بِآيَاتِ اللَّهِ ۚ وَاللَّهُ لَا يَهْدِي الْقَوْمَ الظَّالِمِينَ

'ತೌರಾತ್'ನ ವಾಹಕರಾಗಿ ನೇಮಿಸಲ್ಪಟ್ಟರೂ ಅದರ ಭಾರವನ್ನು ಹೊರದೆ ಇದ್ದವರ ಉದಾಹರಣೆಯು ಗ್ರಂಥಗಳು ಹೇರಲ್ಪಟ್ಟ ಕತ್ತೆಯಂತಿದೆ. ಅಲ್ಲಾಹನ ಸೂಕ್ತಗಳನ್ನು ಸುಳ್ಳಾಗಿಸಿದವರ ಉಪಮೆಯೂ ಇದಕ್ಕಿಂತಲೂ ಕೆಟ್ಟದು. ಇಂತಹ ಅಕ್ರಮಿಗಳಿಗೆ ಅಲ್ಲಾಹನು ಮಾರ್ಗದರ್ಶನ ಮಾಡುವುದಿಲ್ಲ.


6قُلْ يَا أَيُّهَا الَّذِينَ هَادُوا إِنْ زَعَمْتُمْ أَنَّكُمْ أَوْلِيَاءُ لِلَّهِ مِنْ دُونِ النَّاسِ فَتَمَنَّوُا الْمَوْتَ إِنْ كُنْتُمْ صَادِقِينَ

ಇವರೊಡನೆ ಹೇಳಿರಿ- "ಯಹೂದಿಗಳಾಗಿ ಬಿಟ್ಟವರೇ, ಇತರೆಲ್ಲರನ್ನು ಬಿಟ್ಟು ನೀವು ಮಾತ್ರ ಅಲ್ಲಾಹನಿಗೆ ನೆಚ್ಚಿನವರೆಂಬ ದುರಭಿಮಾನ ನಿಮಗಿದ್ದರೆ ಮತ್ತು ಅದರಲ್ಲಿ ನೀವು ಸತ್ಯವಂತರಾಗಿದ್ದರೆ ಮರಣವನ್ನು ಅಪೇಕ್ಷಿಸಿರಿ.


7وَلَا يَتَمَنَّوْنَهُ أَبَدًا بِمَا قَدَّمَتْ أَيْدِيهِمْ ۚ وَاللَّهُ عَلِيمٌ بِالظَّالِمِينَ

ಆದರೆ ತಾವು ಮಾಡಿರುವಂತಹ ದುಷ್ಕೃತ್ಯಗಳ ಕಾರಣದಿಂದಾಗಿ ಇವರು ಎಷ್ಟು ಮಾತ್ರಕ್ಕೂ ಅದನ್ನು ಅಪೇಕ್ಷಿಸಲಾರರು ಮತ್ತು ಅಲ್ಲಾಹನು ಈ ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು."


8قُلْ إِنَّ الْمَوْتَ الَّذِي تَفِرُّونَ مِنْهُ فَإِنَّهُ مُلَاقِيكُمْ ۖ ثُمَّ تُرَدُّونَ إِلَىٰ عَالِمِ الْغَيْبِ وَالشَّهَادَةِ فَيُنَبِّئُكُمْ بِمَا كُنْتُمْ تَعْمَلُونَ

ಇವರೊಡನೆ ಹೇಳಿರಿ- "ನೀವು ಯಾವ ಮರಣದಿಂದ ಪಲಾಯನ ಮಾಡುತ್ತಿರುವಿರೋ ಅದು ನಿಮಗೆ ಬಂದೇ ತೀರುವುದು. ಅನಂತರ ನೀವು ಪ್ರತ್ಯಕ್ಷ ಪರೋಕ್ಷಗಳನ್ನು ಬಲ್ಲವನಾಗಿರುವವನ ಮುಂದೆ ಹಾಜರುಗೊಳಿಸಲ್ಪಡುವಿರಿ. ನೀವು ಏನೇನು ಮಾಡುತ್ತಿದ್ದಿರೆಂಬುದನ್ನು ಅವನು ಆಗ ನಿಮಗೆ ತಿಳಿಸುವನು."


9يَا أَيُّهَا الَّذِينَ آمَنُوا إِذَا نُودِيَ لِلصَّلَاةِ مِنْ يَوْمِ الْجُمُعَةِ فَاسْعَوْا إِلَىٰ ذِكْرِ اللَّهِ وَذَرُوا الْبَيْعَ ۚ ذَٰلِكُمْ خَيْرٌ لَكُمْ إِنْ كُنْتُمْ تَعْلَمُونَ

ಸತ್ಯವಿಶ್ವಾಸಿಗಳೇ, ಶುಕ್ರವಾರ ದಿನ ನಮಾಝಿಗಾಗಿ ಕರೆಯಲಾದಾಗ ಅಲ್ಲಾಹನ 'ಸ್ಮರಣೆಯ' ಕಡೆಗೆ ಧಾವಿಸಿರಿ ಮತ್ತು ಕ್ರಯ-ವಿಕ್ರಯ ಗಳನ್ನು ಬಿಟ್ಟುಬಿಡಿರಿ. ನೀವು ಅರಿತವರಾಗಿದ್ದರೆ ಇದು ನಿಮಗೆ ಅತ್ಯುತ್ತಮವಾಗಿದೆ.


10فَإِذَا قُضِيَتِ الصَّلَاةُ فَانْتَشِرُوا فِي الْأَرْضِ وَابْتَغُوا مِنْ فَضْلِ اللَّهِ وَاذْكُرُوا اللَّهَ كَثِيرًا لَعَلَّكُمْ تُفْلِحُونَ

ನಮಾಝ್ ಮುಗಿದ ಬಳಿಕ ಭೂಮಿಯ ಮೇಲೆ ಚದುರಿ ಬಿಡಿರಿ ಮತ್ತು ಅಲ್ಲಾಹನ ಅನುಗ್ರಹವನ್ನರಸಿರಿ. ಅಲ್ಲಾಹನನ್ನು ಅತ್ಯಧಿಕ ಸ್ಮರಿಸುತ್ತಲಿರಿ. ನಿಮಗೆ ಯಶಸ್ಸು ಪ್ರಾಪ್ತವಾಗಲೂಬಹುದು.