1 قَدْ سَمِعَ اللَّهُ قَوْلَ الَّتِي تُجَادِلُكَ فِي زَوْجِهَا وَتَشْتَكِي إِلَى اللَّهِ وَاللَّهُ يَسْمَعُ تَحَاوُرَكُمَا ۚ إِنَّ اللَّهَ سَمِيعٌ بَصِيرٌ

ನಿಮ್ಮೊಡನೆ ತನ್ನ ಪತಿಯ ವಿಷಯದಲ್ಲಿ ವಾದಿಸುತ್ತಿರುವ ಹಾಗೂ ಅಲ್ಲಾಹನೊಡನೆ ಮೊರೆಯಿಡುತ್ತಲಿರುವ ಸ್ತ್ರೀಯ ಮಾತನ್ನು ಅಲ್ಲಾಹನು ಆಲಿಸಿದನು. ಅಲ್ಲಾಹನು ನಿಮ್ಮಿಬ್ಬರ ಸಂಭಾಷಣೆಯನ್ನು ಕೇಳುತ್ತಿದ್ದಾನೆ. ಅವನು ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ.


2الَّذِينَ يُظَاهِرُونَ مِنْكُمْ مِنْ نِسَائِهِمْ مَا هُنَّ أُمَّهَاتِهِمْ ۖ إِنْ أُمَّهَاتُهُمْ إِلَّا اللَّائِي وَلَدْنَهُمْ ۚ وَإِنَّهُمْ لَيَقُولُونَ مُنْكَرًا مِنَ الْقَوْلِ وَزُورًا ۚ وَإِنَّ اللَّهَ لَعَفُوٌّ غَفُورٌ

ನಿಮ್ಮ ಪೈಕಿ ತಮ್ಮ ಪತ್ನಿಯರನ್ನು 'ಝಿಹಾರ್' ಮಾಡುವವರ ಪತ್ನಿಯರು ಅವರ ತಾಯಂದಿರಲ್ಲ. ಅವರನ್ನು ಹೆತ್ತವರೇ ಅವರ ತಾಯಂದಿರು. ಇವರು ಅತ್ಯಂತ ಅಪ್ರಿಯ ಹಾಗೂ ಸುಳ್ಳಾದ ಒಂದು ಮಾತನ್ನು ಹೇಳುತ್ತಾರೆ. ವಾಸ್ತವದಲ್ಲಿ ಅಲ್ಲಾಹನು ಬಹಳ ಮನ್ನಿಸುವವನೂ ಮಹಾಕ್ಷಮಾಶೀಲನೂ ಆಗಿರುತ್ತಾನೆ.


3وَالَّذِينَ يُظَاهِرُونَ مِنْ نِسَائِهِمْ ثُمَّ يَعُودُونَ لِمَا قَالُوا فَتَحْرِيرُ رَقَبَةٍ مِنْ قَبْلِ أَنْ يَتَمَاسَّا ۚ ذَٰلِكُمْ تُوعَظُونَ بِهِ ۚ وَاللَّهُ بِمَا تَعْمَلُونَ خَبِيرٌ

ತಮ್ಮ ಪತ್ನಿಯರನ್ನು 'ಝಿಹಾರ್' ಮಾಡಿದವರು ಅನಂತರ ತಾವು ಹೇಳಿದ ಮಾತಿನಿಂದ ಮರಳಿದರೆ ಅವರು ಪರಸ್ಪರರನ್ನು ಸ್ಪರ್ಶಿಸುವುದಕ್ಕೆ ಮುಂಚೆ ಒಬ್ಬ ಗುಲಾಮನನ್ನು ವಿಮೋಚಿಸ ಬೇಕಾಗುವುದು. ಹೀಗೆ ನಿಮಗೆ ಉಪದೇಶ ನೀಡಲಾಗುತ್ತದೆ ಮತ್ತು ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಅರಿತಿರುವನು.


4فَمَنْ لَمْ يَجِدْ فَصِيَامُ شَهْرَيْنِ مُتَتَابِعَيْنِ مِنْ قَبْلِ أَنْ يَتَمَاسَّا ۖ فَمَنْ لَمْ يَسْتَطِعْ فَإِطْعَامُ سِتِّينَ مِسْكِينًا ۚ ذَٰلِكَ لِتُؤْمِنُوا بِاللَّهِ وَرَسُولِهِ ۚ وَتِلْكَ حُدُودُ اللَّهِ ۗ وَلِلْكَافِرِينَ عَذَابٌ أَلِيمٌ

ಯಾರಿಗಾದರೂ ಗುಲಾಮನು ಸಿಗದಿದ್ದರೆ- ಅವರಿಬ್ಬರು ಪರಸ್ಪರ ರನ್ನು ಸ್ಪರ್ಶಿಸುವುದಕ್ಕೆ ಮುಂಚೆ - ಅವನು ನಿರಂತರವಾಗಿ ಎರಡು ತಿಂಗಳ ಉಪವಾಸ ವ್ರತವನ್ನು ಆಚರಿಸಬೇಕು. ಇದಕ್ಕೂ ಅಶಕ್ತನಾಗಿರುವವನು ಅರುವತ್ತು ಮಂದಿ ದರಿದ್ರರಿಗೆ ಊಟ ಕೊಡಬೇಕು. ನೀವು ಅಲ್ಲಾಹ್ ಮತ್ತು ಅವನ ರಸೂಲರ ಮೇಲೆ ವಿಶ್ವಾಸವಿರಿಸುವಂತಾಗಲಿಕ್ಕಾಗಿ ಈ ಆಜ್ಞೆಯನ್ನು ನೀಡಲಾಗುತ್ತಿದೆ. ಇವು ಅಲ್ಲಾಹನಿಂದ ನಿಶ್ಚಯಿಸಲ್ಪಟ್ಟಿರುವ ಮೇರೆಗಳು ಮತ್ತು ಸತ್ಯನಿಷೇಧಿಗಳಿಗೆ ವೇದನಾಯುಕ್ತ ಯಾತನೆಯಿದೆ.


5إِنَّ الَّذِينَ يُحَادُّونَ اللَّهَ وَرَسُولَهُ كُبِتُوا كَمَا كُبِتَ الَّذِينَ مِنْ قَبْلِهِمْ ۚ وَقَدْ أَنْزَلْنَا آيَاتٍ بَيِّنَاتٍ ۚ وَلِلْكَافِرِينَ عَذَابٌ مُهِينٌ

ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುವವರು ತಮಗಿಂತ ಹಿಂದಿನವರು ಅಪಮಾನಿತರಾದಂತೆಯೇ ಅಪಮಾನಿತರಾಗುವರು. ನಾವು ಸುಸ್ಪಷ್ಟ ಸೂಕ್ತಗಳನ್ನು ಅವತೀರ್ಣಗೊಳಿಸಿದ್ದೇವೆ ಮತ್ತು ಸತ್ಯನಿಷೇಧಿಗಳಿಗೆ ಅಪಮಾನಕರ ಯಾತನೆ ಇದೆ.


6يَوْمَ يَبْعَثُهُمُ اللَّهُ جَمِيعًا فَيُنَبِّئُهُمْ بِمَا عَمِلُوا ۚ أَحْصَاهُ اللَّهُ وَنَسُوهُ ۚ وَاللَّهُ عَلَىٰ كُلِّ شَيْءٍ شَهِيدٌ

ಅಲ್ಲಾಹನು ಇವರೆಲ್ಲರನ್ನೂ ಪುನಃ ಜೀವಂತಗೊಳಿಸಿ ಎಬ್ಬಿಸುವ ಮತ್ತು ಅವರು ಏನೆಲ್ಲ ಮಾಡಿ ಬಂದಿರುವರೆಂಬುದನ್ನು ಅವರಿಗೆ ತಿಳಿಸುವ ದಿನ (ಈ ಅಪಮಾನಕರ ಯಾತನೆ ಒದಗಲಿದೆ.) ಅವರು ಮರೆತು ಬಿಟ್ಟಿದ್ದಾರೆ. ಆದರೆ ಅಲ್ಲಾಹನು ಅವರು ಮಾಡಿದುದೆಲ್ಲವನ್ನೂ ಎಣಿಸಿ ಕಾಯ್ದಿರಿಸಿದ್ದಾನೆ. ಅಲ್ಲಾಹನು ಪ್ರತಿಯೊಂದು ವಸ್ತುವಿನ ಬಗೆಗೂ ಸಾಕ್ಷಿಯಾಗಿದ್ದಾನೆ.


7أَلَمْ تَرَ أَنَّ اللَّهَ يَعْلَمُ مَا فِي السَّمَاوَاتِ وَمَا فِي الْأَرْضِ ۖ مَا يَكُونُ مِنْ نَجْوَىٰ ثَلَاثَةٍ إِلَّا هُوَ رَابِعُهُمْ وَلَا خَمْسَةٍ إِلَّا هُوَ سَادِسُهُمْ وَلَا أَدْنَىٰ مِنْ ذَٰلِكَ وَلَا أَكْثَرَ إِلَّا هُوَ مَعَهُمْ أَيْنَ م

ಭೂಮಿ-ಆಕಾಶಗಳ ಪ್ರತಿಯೊಂದು ವಸ್ತುವಿನ ಜ್ಞಾನವು ಅಲ್ಲಾಹನಿಗೆ ಇದೆ ಎಂಬುದು ನಿಮಗೆ ತಿಳಿದಿಲ್ಲವೇ? ಮೂರು ಮಂದಿಯ ನಡುವೆ ರಹಸ್ಯ ಮಾತುಕತೆ ನಡೆಯುತ್ತಿರುವಾಗ ಅವರೊಂದಿಗೆ ನಾಲ್ಕನೆಯವನಾಗಿ ಅಲ್ಲಾಹನು ಎಂದೂ ಇಲ್ಲದೆ ಇರುವುದಿಲ್ಲ ಅಥವಾ ಐವರೊಳಗೆ ರಹಸ್ಯ ಮಾತುಕತೆ ನಡೆಯುತ್ತಿರುವಾಗ ಆರನೆಯವನಾಗಿ ಅಲ್ಲಾಹನಿಲ್ಲದೆ ಇರುವುದಿಲ್ಲ. ರಹಸ್ಯ ಮಾತುಕತೆ ನಡೆಸುತ್ತಿರುವವರು ಇದಕ್ಕಿಂತ ಕಡಿಮೆ ಇರಲಿ ಅಥವಾ ಹೆಚ್ಚಿರಲಿ, ಅವರು ಎಲ್ಲೇ ಇರಲಿ, ಅಲ್ಲಾಹನು ಅವರ ಜೊತೆಗಿರುತ್ತಾನೆ ಮತ್ತು ಪುನರುತ್ಥಾನ ದಿನ ಅವನು ಅವರಿಗೆ, ಅವರು ಏನೆಲ್ಲ ಮಾಡಿದ್ದರೆಂಬುದನ್ನು ತಿಳಿಸುವನು. ಅಲ್ಲಾಹನು ಸಕಲ ವಸ್ತುಗಳ ಜ್ಞಾನವುಳ್ಳವನು.


8أَلَمْ تَرَ إِلَى الَّذِينَ نُهُوا عَنِ النَّجْوَىٰ ثُمَّ يَعُودُونَ لِمَا نُهُوا عَنْهُ وَيَتَنَاجَوْنَ بِالْإِثْمِ وَالْعُدْوَانِ وَمَعْصِيَتِ الرَّسُولِ وَإِذَا جَاءُوكَ حَيَّوْكَ بِمَا لَمْ يُحَيِّكَ بِهِ اللَّهُ وَيَقُولُونَ فِي أَنْفُسِهِمْ لَو

ಗುಪ್ತ ಸಮಾಲೋಚನೆಗಳಿಂದ ತಡೆಯಲಾಗಿದ್ದರೂ ತಮಗೆ ಪ್ರತಿಬಂಧಿಸಲಾಗಿರುವ ಆ ಕೃತ್ಯವನ್ನೇ ಮಾಡುತ್ತಿರುವ ಜನರನ್ನು ನೀವು ನೋಡಲಿಲ್ಲವೇ? ಇವರು ಗುಪ್ತವಾಗಿ ಪರಸ್ಪರರೊಡನೆ, ಪಾಪ, ಅತಿರೇಕ ಹಾಗೂ ಸಂದೇಶವಾಹಕರ ಆಜ್ಞೋಲ್ಲಂಘನೆಯ ಮಾತುಗಳನ್ನಾಡುತ್ತಾರೆ ಮತ್ತು ಇವರು ನಿಮ್ಮ ಬಳಿಗೆ ಬಂದಾಗ ಅಲ್ಲಾಹನು ನಿಮಗೆ ಸಲಾಮ್ ಮಾಡಿರದ ರೀತಿಯಲ್ಲಿ ನಿಮಗೆ ಸಲಾಮ್ ಮಾಡುತ್ತಾರೆ ಮತ್ತು ನಮ್ಮ ಈ ಮಾತುಗಳಿಗಾಗಿ ಅಲ್ಲಾಹನು ನಮಗೆ ಶಿಕ್ಷೆ ನೀಡುವುದಿಲ್ಲವೇಕೆ ಎಂದು ತಮ್ಮ ಮನಸ್ಸಿನೊಳಗೆ ಹೇಳಿಕೊಳ್ಳುತ್ತಾರೆ. ಅವರಿಗೆ ನರಕವೇ ಸಾಕು. ಅವರು ಅದಕ್ಕೇ ಇಂಧನವಾಗುವರು. ಅವರ ಗತಿಯು ತೀರಾ ಕೆಟ್ಟದ್ದಾಗಿರುವುದು.


9يَا أَيُّهَا الَّذِينَ آمَنُوا إِذَا تَنَاجَيْتُمْ فَلَا تَتَنَاجَوْا بِالْإِثْمِ وَالْعُدْوَانِ وَمَعْصِيَتِ الرَّسُولِ وَتَنَاجَوْا بِالْبِرِّ وَالتَّقْوَىٰ ۖ وَاتَّقُوا اللَّهَ الَّذِي إِلَيْهِ تُحْشَرُونَ

ಸತ್ಯವಿಶ್ವಾಸಿಗಳೇ, ನೀವು ಪರಸ್ಪರ ರಹಸ್ಯ ಮಾತುಗಳನ್ನಾಡುವಾಗ ಪಾಪ, ಅತಿರೇಕ ಮತ್ತು ಸಂದೇಶವಾಹಕರ ಆಜ್ಞೋಲ್ಲಂಘನೆಯ ಮಾತುಗಳನ್ನಾಡಬೇಡಿ, ಪುಣ್ಯದ ಹಾಗೂ ಧರ್ಮನಿಷ್ಠೆಯ ಮಾತು ಗಳನ್ನಾಡಿರಿ ಮತ್ತು ನಿಮ್ಮನ್ನು ಒಟ್ಟುಗೂಡಿಸಲ್ಪಡುವ ದಿನ ನೀವು ಯಾರ ಮುಂದೆ ಹಾಜರಾಗಲಿಕ್ಕಿದೆಯೋ ಆ ಅಲ್ಲಾಹನನ್ನು ಭಯಪಡಿರಿ.


10إِنَّمَا النَّجْوَىٰ مِنَ الشَّيْطَانِ لِيَحْزُنَ الَّذِينَ آمَنُوا وَلَيْسَ بِضَارِّهِمْ شَيْئًا إِلَّا بِإِذْنِ اللَّهِ ۚ وَعَلَى اللَّهِ فَلْيَتَوَكَّلِ الْمُؤْمِنُونَ

ಗುಪ್ತ ಸಮಾಲೋಚನೆಯು ಪೈಶಾಚಿಕ ಕೃತ್ಯವಾಗಿದೆ. ಸತ್ಯ ವಿಶ್ವಾಸಿಗಳು ಅದರಿಂದ ಬೇಸರಗೊಳ್ಳಲೆಂದು ಹಾಗೆ ಮಾಡಲಾಗುತ್ತದೆ. ಆದರೆ ಅಲ್ಲಾಹನ ಅನುಮತಿಯಿಲ್ಲದೆ ಅದು ಯಾವ ಹಾನಿಯನ್ನೂ ಮಾಡಲಾರದು. ಸತ್ಯವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆ ಇಡಬೇಕು.