1 حم

ಹಾ ಮೀಮ್.


2تَنْزِيلٌ مِنَ الرَّحْمَٰنِ الرَّحِيمِ

ಇದು ಪರಮ ದಯಾಮಯನೂ ಕರುಣಾನಿಧಿಯೂ ಆದವನ ಕಡೆಯಿಂದ ಅವತೀರ್ಣ ಗೊಳಿಸಲ್ಪಟ್ಟುದಾಗಿದೆ.


3كِتَابٌ فُصِّلَتْ آيَاتُهُ قُرْآنًا عَرَبِيًّا لِقَوْمٍ يَعْلَمُونَ

ಸೂಕ್ತಗಳು ಸುಸ್ಪಷ್ಟವಾಗಿ ವಿವರಿಸಲ್ಪಟ್ಟಿರುವ ಗ್ರಂಥವಿದು. ಜ್ಞಾನವುಳ್ಳವರಿಗಾಗಿ ಅರಬೀ ಭಾಷೆಯ ಕುರ್ ಆನ್.


4بَشِيرًا وَنَذِيرًا فَأَعْرَضَ أَكْثَرُهُمْ فَهُمْ لَا يَسْمَعُونَ

ಸುವಾರ್ತೆ ಹಾಗೂ ಎಚ್ಚರಿಕೆ ನೀಡುವಂತಹದು. ಆದರೆ ಇವರಲ್ಲಿ ಹೆಚ್ಚಿನವರು ಇದರಿಂದ ವಿಮುಖರಾದರು ಮತ್ತು ಅವರು ಕಿವಿಗೊಡುವುದಿಲ್ಲ.


5وَقَالُوا قُلُوبُنَا فِي أَكِنَّةٍ مِمَّا تَدْعُونَا إِلَيْهِ وَفِي آذَانِنَا وَقْرٌ وَمِنْ بَيْنِنَا وَبَيْنِكَ حِجَابٌ فَاعْمَلْ إِنَّنَا عَامِلُونَ

\"ನೀವು ಯಾವುದರ ಕಡೆಗೆ ನಮ್ಮನ್ನು ಕರೆಯುತ್ತಿರುವಿರೋ ಅದರ ಬಗ್ಗೆ ನಮ್ಮ ಹೃದಯಗಳ ಮೇಲೆ ಹೊದಿಕೆಗಳು ಹೊದಿಸಲ್ಪಟ್ಟಿವೆ. ನಮ್ಮ ಕಿವಿಗಳು ಕಿವುಡಾಗಿ ಬಿಟ್ಟಿವೆ. ನಮ್ಮ ಮತ್ತು ನಿಮ್ಮ ನಡುವೆ ಒಂದು ತೆರೆ ಬಿದ್ದಿದೆ. ನೀವು ನಿಮ್ಮ ಕೆಲಸ ಮಾಡಿರಿ, ನಾವು ನಮ್ಮ ಕೆಲಸ ಮಾಡುತ್ತ ಹೋಗುವೆವು\" ಎನ್ನುತ್ತಾರೆ.


6قُلْ إِنَّمَا أَنَا بَشَرٌ مِثْلُكُمْ يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ فَاسْتَقِيمُوا إِلَيْهِ وَاسْتَغْفِرُوهُ ۗ وَوَيْلٌ لِلْمُشْرِكِينَ

ಸಂದೇಶವಾಹಕರೇ, ಇವರೊಡನೆ ಹೇಳಿರಿ, \"ನಾನು ನಿಮ್ಮಂತೆಯೇ ಇರುವ ಒಬ್ಬ ಮನುಷ್ಯನೇ ಆಗಿದ್ದೇನೆ. ನಿಮ್ಮ ಆರಾಧ್ಯನು ಏಕಮಾತ್ರ ಆರಾಧ್ಯನಾಗಿರುವನೆಂದು ನನಗೆ \'ದಿವ್ಯವಾಣಿ\' ಮೂಲಕ ತಿಳಿಸಲಾಗುತ್ತದೆ. ಆದುದರಿಂದ ನೀವು ನೇರವಾಗಿ ಅವನದೇ ದಿಕ್ಕನ್ನು ಅನುಸರಿಸಿರಿ ಮತ್ತು ಅವನೊಡನೆ ಕ್ಷಮೆಯಾಚಿಸಿರಿ. ಬಹುದೇವ ವಿಶ್ವಾಸಿಗಳಿಗೆ ವಿನಾಶವಿದೆ.-


7الَّذِينَ لَا يُؤْتُونَ الزَّكَاةَ وَهُمْ بِالْآخِرَةِ هُمْ كَافِرُونَ

ಅವರು ಝಕಾತ್ ಕೊಡದವರು ಹಾಗೂ ಪರಲೋಕ ಜೀವನವನ್ನು ನಿರಾಕರಿಸುವವರು.


8إِنَّ الَّذِينَ آمَنُوا وَعَمِلُوا الصَّالِحَاتِ لَهُمْ أَجْرٌ غَيْرُ مَمْنُونٍ

ಆದರೆ ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಕರ್ಮವೆಸಗಿದವರಿಗಾಗಿ ಖಂಡಿತವಾಗಿಯೂ ಎಂದೂ ಕೊನೆಗೊಳ್ಳದಂತಹ ಸತ್ಫಲವಿದೆ.\"


9قُلْ أَئِنَّكُمْ لَتَكْفُرُونَ بِالَّذِي خَلَقَ الْأَرْضَ فِي يَوْمَيْنِ وَتَجْعَلُونَ لَهُ أَنْدَادًا ۚ ذَٰلِكَ رَبُّ الْعَالَمِينَ

ಸಂದೇಶವಾಹಕರೇ, ಇವರೊಡನೆ ಹೇಳಿರಿ- \"ಭೂಮಿಯನ್ನು ಎರಡೇ ದಿನಗಳಲ್ಲಿ ಸೃಷ್ಟಿಸಿದಂತಹ ದೇವನನ್ನು ನೀವು ನಿರಾಕರಿಸುತ್ತೀರಾ? ಮತ್ತು ಇತರರನ್ನು ಅವನಿಗೆ ಸರಿಸಮಾನರಾಗಿ ಮಾಡುತ್ತೀರಾ? ಸಕಲ ಲೋಕಗಳ ಪಾಲಕ ಪ್ರಭು ಅವನೇ ತಾನೆ.


10وَجَعَلَ فِيهَا رَوَاسِيَ مِنْ فَوْقِهَا وَبَارَكَ فِيهَا وَقَدَّرَ فِيهَا أَقْوَاتَهَا فِي أَرْبَعَةِ أَيَّامٍ سَوَاءً لِلسَّائِلِينَ

ಅವನು (ಭೂಮಿಯನ್ನು ಅಸ್ತಿತ್ವಕ್ಕೆ ತಂದ ಬಳಿಕ) ಅದರ ಮೇಲೆ ಪರ್ವತಗಳನ್ನು ನಾಟಿದನು. ಅದರಲ್ಲಿ ಸಮೃದ್ಧಿಗಳನ್ನಿರಿಸಿದನು ಮತ್ತು ಅದರಲ್ಲಿ ಎಲ್ಲ ಅಪೇಕ್ಷ ಕರಿಗಾಗಿ ಅವರವರ ಅಗತ್ಯಾನುಸಾರ, ಸರಿಯಾದ ಪ್ರಮಾಣದಲ್ಲಿ ಆಹಾರ ವಸ್ತುಗಳನ್ನು ಒದಗಿಸಿದನು. ಈ ಕಾರ್ಯಗಳೆಲ್ಲ ನಾಲ್ಕು ದಿನಗಳಲ್ಲಾದವು.\"