1 تَنْزِيلُ الْكِتَابِ مِنَ اللَّهِ الْعَزِيزِ الْحَكِيمِ

ಈ ಗ್ರಂಥದ ಅವತೀರ್ಣವು ಪ್ರಬಲನೂ ಯುಕ್ತಿಪೂರ್ಣನೂ ಆದ ಅಲ್ಲಾಹನ ಕಡೆಯಿಂದಾಗಿರುತ್ತದೆ.


2إِنَّا أَنْزَلْنَا إِلَيْكَ الْكِتَابَ بِالْحَقِّ فَاعْبُدِ اللَّهَ مُخْلِصًا لَهُ الدِّينَ

(ಸಂದೇಶವಾಹಕರೇ) ಈ ಗ್ರಂಥವನ್ನು ನಾವು ನಿಮ್ಮ ಕಡೆಗೆ ಪರಮ ಸತ್ಯವಾಗಿ ಅವತೀರ್ಣಗೊಳಿಸಿರುತ್ತೇವೆ.ಆದುದರಿಂದ ನೀವು ಧರ್ಮವನ್ನು ಅಲ್ಲಾಹನಿಗಾಗಿಯೇ ಮೀಸಲಿರಿಸುತ್ತ ಅವನ ದಾಸ್ಯವನ್ನೇ ಮಾಡಿರಿ.


3أَلَا لِلَّهِ الدِّينُ الْخَالِصُ ۚ وَالَّذِينَ اتَّخَذُوا مِنْ دُونِهِ أَوْلِيَاءَ مَا نَعْبُدُهُمْ إِلَّا لِيُقَرِّبُونَا إِلَى اللَّهِ زُلْفَىٰ إِنَّ اللَّهَ يَحْكُمُ بَيْنَهُمْ فِي مَا هُمْ فِيهِ يَخْتَلِفُونَ ۗ إِنَّ اللَّهَ لَا يَهْدِي مَنْ هُو

ಎಚ್ಚರಿಕೆ! ಧರ್ಮವು ನಿಷ್ಕಳಂಕವಾಗಿ ಕೇವಲ ಅಲ್ಲಾಹನ ಹಕ್ಕಾಗಿದೆ. ಇನ್ನು ಅವನ ಹೊರತು ಇತರರನ್ನು ರಕ್ಷಕ ಮಿತ್ರರಾಗಿ ಮಾಡಿಕೊಂಡವರ ವಿಷಯ- \"ಅವರು ನಮ್ಮನ್ನು ಅಲ್ಲಾಹನಿಗೆ ನಿಕಟಗೊಳಿಸಲಿಕ್ಕಾಗಿ ಮಾತ್ರ ನಾವು ಅವರ ಆರಾಧನೆ ಮಾಡುತ್ತೇವೆ\"(ಎಂದು ಅವರು ವಾದಿಸುತ್ತಾರೆ.) ಖಂಡಿತವಾಗಿಯೂ ಅಲ್ಲಾಹನು ಅವರು ಭಿನ್ನತೆ ತೋರಿದ ಎಲ್ಲ ವಿಷಯಗಳ ತೀರ್ಮಾನ ಮಾಡಿ ಬಿಡುವನು. ಸುಳ್ಳುಗಾರನೂ ಸತ್ಯನಿಷೇಧಿಯೂ ಆಗಿರುವಂಥವನಿಗೆ ಅಲ್ಲಾಹನು ಸನ್ಮಾರ್ಗದರ್ಶನವೀಯುವುದಿಲ್ಲ.


4لَوْ أَرَادَ اللَّهُ أَنْ يَتَّخِذَ وَلَدًا لَاصْطَفَىٰ مِمَّا يَخْلُقُ مَا يَشَاءُ ۚ سُبْحَانَهُ ۖ هُوَ اللَّهُ الْوَاحِدُ الْقَهَّارُ

ಅಲ್ಲಾಹನು ಯಾರನ್ನಾದರೂ ಪುತ್ರನಾಗಿ ಮಾಡಿಕೊಳ್ಳಲು ಇಚ್ಛಿಸುತ್ತಿದ್ದರೆ, ತನ್ನ ಸೃಷ್ಟಿಯಲ್ಲಿ ತಾನಿಚ್ಛಿಸಿದವರನ್ನು ಪುನೀತನಾಗಿ ಮಾಡಿಕೊಳ್ಳುತ್ತಿದ್ದನು. ಅವನು (ಪುತ್ರನನ್ನಿರಿಸಿಕೊಳ್ಳುವುದರಿಂದ) ಪರಿಶುದ್ಧನಾಗಿರುತ್ತಾನೆ. ಅವನು ಅಲ್ಲಾಹ್, ಏಕೈಕನು ಮತ್ತು ಎಲ್ಲರ ಮೇಲೆ ಪ್ರಾಬಲ್ಯವುಳ್ಳವನು.


5خَلَقَ السَّمَاوَاتِ وَالْأَرْضَ بِالْحَقِّ ۖ يُكَوِّرُ اللَّيْلَ عَلَى النَّهَارِ وَيُكَوِّرُ النَّهَارَ عَلَى اللَّيْلِ ۖ وَسَخَّرَ الشَّمْسَ وَالْقَمَرَ ۖ كُلٌّ يَجْرِي لِأَجَلٍ مُسَمًّى ۗ أَلَا هُوَ الْعَزِيزُ الْغَفَّارُ

ಅವನು ಭೂಮಿ-ಆಕಾಶಗಳನ್ನು ಸತ್ಯಪೂರ್ಣವಾಗಿ ಸೃಷ್ಟಿಸಿರುವನು. ಅವನೇ ಹಗಲಿನ ಮೇಲೆ ಇರುಳನ್ನೂ ಇರುಳಿನ ಮೇಲೆ ಹಗಲನ್ನೂ ಸುತ್ತುತ್ತಾನೆ. ಅವನೇ ಸೂರ್ಯ ಮತ್ತು ಚಂದ್ರನನ್ನು ನಿಯಂತ್ರಿಸಿರುತ್ತಾನೆ. ಅವುಗಳಲ್ಲಿ ಪ್ರತಿಯೊಂದೂ ಒಂದು ನಿರ್ದಿಷ್ಟ ಕಾಲದವರೆಗೆ ಚಲಿಸುತ್ತಿರುವುದು. ಅವನು ಪ್ರಬಲನೂ ಮಹಾ ಕ್ಷಮಾಶೀಲನೂ ಆಗಿರುತ್ತಾನೆಂಬುದನ್ನು ತಿಳಿದುಕೊಳ್ಳಿರಿ.


6خَلَقَكُمْ مِنْ نَفْسٍ وَاحِدَةٍ ثُمَّ جَعَلَ مِنْهَا زَوْجَهَا وَأَنْزَلَ لَكُمْ مِنَ الْأَنْعَامِ ثَمَانِيَةَ أَزْوَاجٍ ۚ يَخْلُقُكُمْ فِي بُطُونِ أُمَّهَاتِكُمْ خَلْقًا مِنْ بَعْدِ خَلْقٍ فِي ظُلُمَاتٍ ثَلَاثٍ ۚ ذَٰلِكُمُ اللَّهُ رَبُّكُمْ لَهُ ال

ಅವನೇ ನಿಮ್ಮನ್ನು ಒಂದೇ ಜೀವದಿಂದ ಸೃಷ್ಟಿಸಿದನು. ತರುವಾಯ ಆ ಜೀವದಿಂದ ಅದರ ಜೊತೆಯನ್ನು ಸೃಷ್ಟಿಸಿದವನೂ ಅವನೇ ಮತ್ತು ನಿಮ್ಮ ಜಾನುವಾರುಗಳಿಂದ ನಿಮಗಾಗಿ ಎಂಟು ಗಂಡು-ಹೆಣ್ಣುಗಳನ್ನು ಒದಗಿಸಿದವನೂ ಅವನೇ. ಅವನು ನಿಮ್ಮ ಮಾತೆಯರ ಉದರಗಳೊಳಗೆ, ಮೂರು ಕತ್ತಲು ಪರದೆಗಳೊಳಗೆ (ನಿಮಗೆ) ಒಂದರ ನಂತರ ಒಂದು ರೂಪ ಕೊಡುತ್ತಾ ಸಾಗುತ್ತಾನೆ. (ಇವೆಲ್ಲ ಕಾರ್ಯಗಳನ್ನು ಮಾಡುತ್ತಿರುವ) ಈ ಅಲ್ಲಾಹನೇ ನಿಮ್ಮ ಪಾಲಕ ಪ್ರಭು. ಪ್ರಭುತ್ವವು ಅವನಿಗೇ ಸೇರಿದೆ. ಅವನ ಹೊರತು ಯಾವ ಆರಾಧ್ಯನೂ ಇಲ್ಲ. ಹೀಗಿರುತ್ತ ನೀವು ಅದೆಲ್ಲಿಂದ ದಾರಿಗೆಡಿಸಲ್ಪಡುತ್ತಿರುವಿರಿ?


7إِنْ تَكْفُرُوا فَإِنَّ اللَّهَ غَنِيٌّ عَنْكُمْ ۖ وَلَا يَرْضَىٰ لِعِبَادِهِ الْكُفْرَ ۖ وَإِنْ تَشْكُرُوا يَرْضَهُ لَكُمْ ۗ وَلَا تَزِرُ وَازِرَةٌ وِزْرَ أُخْرَىٰ ۗ ثُمَّ إِلَىٰ رَبِّكُمْ مَرْجِعُكُمْ فَيُنَبِّئُكُمْ بِمَا كُنْتُمْ تَعْمَلُونَ ۚ إِ

ನೀವು ಸತ್ಯವನ್ನು ನಿಷೇಧಿಸಿದರೆ, ಅಲ್ಲಾಹ್ ನಿಮ್ಮಿಂದ ನಿರಪೇಕ್ಷನಾಗಿದ್ದಾನೆ. ಆದರೆ ಅವನು ತನ್ನ ದಾಸರ ಪಾಲಿಗೆ ಸತ್ಯನಿಷೇಧವನ್ನು ಮೆಚ್ಚುವುದಿಲ್ಲ ಮತ್ತು ನೀವು ಕೃತಜ್ಞರಾದರೆ ಅದನ್ನು ಅವನು ನಿಮ್ಮ ಪಾಲಿಗೆ ಮೆಚ್ಚುತ್ತಾನೆ. ಹೊರೆ ಹೊರುವವನಾರೂ ಇನ್ನೊಬ್ಬನ ಹೊರೆಯನ್ನು ಹೊರಲಾರನು. ಕೊನೆಗೆ ನಿಮಗೆಲ್ಲರಿಗೂ ನಿಮ್ಮ ಪ್ರಭುವಿನ ಕಡೆಗೇ ಮರಳಲಿಕ್ಕಿದೆ. ನೀವು ಏನು ಮಾಡುತ್ತಿದ್ದಿರೆಂದು ಆಗ ಅವನು ನಿಮಗೆ ತೋರಿಸಿಬಿಡುವನು. ಅವನಂತು ಮನದೊಳಗಿನ ಸಂಗತಿಯನ್ನೂ ಬಲ್ಲವನಾಗಿರುತ್ತಾನೆ.


8وَإِذَا مَسَّ الْإِنْسَانَ ضُرٌّ دَعَا رَبَّهُ مُنِيبًا إِلَيْهِ ثُمَّ إِذَا خَوَّلَهُ نِعْمَةً مِنْهُ نَسِيَ مَا كَانَ يَدْعُو إِلَيْهِ مِنْ قَبْلُ وَجَعَلَ لِلَّهِ أَنْدَادًا لِيُضِلَّ عَنْ سَبِيلِهِ ۚ قُلْ تَمَتَّعْ بِكُفْرِكَ قَلِيلًا ۖ إِنَّكَ م

ಮನುಷ್ಯನಿಗೇನಾದರೂ ವಿಪತ್ತು ಬಂದೆರಗಿದಾಗ ಅವನು ತನ್ನ ಪ್ರಭುವಿನ ಕಡೆಗೆ ಮರಳಿ ಅವನನ್ನು ಪ್ರಾರ್ಥಿಸುತ್ತಾನೆ. ತರುವಾಯ ಅವನ ಪ್ರಭು ಅವನನ್ನು ತನ್ನ ಕೊಡುಗೆಯಿಂದ ಅನುಗ್ರಹಿಸಿದಾಗ ಅವನು, ಹಿಂದೆ ತಾನು ಯಾವ ಸಂಕಷ್ಟದ ಬಗ್ಗೆ ಪ್ರಾರ್ಥಿಸಿದ್ದನೋ ಅದನ್ನು ಮರೆತು ಬಿಡುತ್ತಾನೆ ಮತ್ತು ಅಲ್ಲಾಹನ ಮಾರ್ಗದಿಂದ ಭ್ರಷ್ಟಗೊಳಿಸಲಿಕ್ಕಾಗಿ ಇತರರನ್ನು ಅವನ ಸಮಾನರೆಂದು ಪರಿಗಣಿಸುತ್ತಾನೆ.(ಸಂದೇಶವಾಹಕರೇ) \"ಸ್ವಲ್ಪ ಕಾಲ ನಿನ್ನ ಸತ್ಯನಿಷೇಧವನ್ನು ಆಸ್ವದಿಸುತ್ತಿರು, ಖಂಡಿತ ವಾಗಿಯೂ ನೀನು ನರಕಕ್ಕೆ ಹೋಗುವವನಾಗಿರುವೆ\"- ಎಂದು ಅವನೊಡನೆ ಹೇಳಿರಿ.


9أَمَّنْ هُوَ قَانِتٌ آنَاءَ اللَّيْلِ سَاجِدًا وَقَائِمًا يَحْذَرُ الْآخِرَةَ وَيَرْجُو رَحْمَةَ رَبِّهِ ۗ قُلْ هَلْ يَسْتَوِي الَّذِينَ يَعْلَمُونَ وَالَّذِينَ لَا يَعْلَمُونَ ۗ إِنَّمَا يَتَذَكَّرُ أُولُو الْأَلْبَابِ

(ಇವನ ನಿಲುಮೆ ಸರಿಯೋ ಅಥವಾ) ಆಜ್ಞಾಪಾಲಕನಾಗಿರುವ, ರಾತ್ರಿಯ ಜಾವಗಳಲ್ಲಿ (ನಮಾಝ್ಗೆ) ನಿಲ್ಲುವ, ಸಾಷ್ಟಾಂಗವೆರಗುವ, ಪರಲೋಕವನ್ನು ಭಯಪಡುವ ಮತ್ತು ತನ್ನ ಪ್ರಭುವಿನ ಕೃಪೆಯನ್ನು ನಿರೀಕ್ಷಿಸುವ ವ್ಯಕ್ತಿಯ (ನಿಲುಮೆ ಸರಿಯೋ)? ಜ್ಞಾನಿಗಳು ಮತ್ತು ಅಜ್ಞಾನಿಗಳು ಇವರಿಬ್ಬರೂ ಎಂದಾದರೂ ಸರಿಸಮಾನರಾಗಬಲ್ಲರೇ? ಎಂದು ಇವರೊಡನೆ ಕೇಳಿರಿ. ಬುದ್ಧಿಜೀವಿಗಳು ಮಾತ್ರ ಉಪದೇಶ ಸ್ವೀಕರಿಸುತ್ತಾರೆ.


10قُلْ يَا عِبَادِ الَّذِينَ آمَنُوا اتَّقُوا رَبَّكُمْ ۚ لِلَّذِينَ أَحْسَنُوا فِي هَٰذِهِ الدُّنْيَا حَسَنَةٌ ۗ وَأَرْضُ اللَّهِ وَاسِعَةٌ ۗ إِنَّمَا يُوَفَّى الصَّابِرُونَ أَجْرَهُمْ بِغَيْرِ حِسَابٍ

(ಸಂದೇಶವಾಹಕರೇ) ಹೇಳಿರಿ- \"ಸತ್ಯವಿಶ್ವಾಸಿಗಳಾದ ನನ್ನ ದಾಸರೇ! ನಿಮ್ಮ ಪ್ರಭುವನ್ನು ಭಯಪಡಿರಿ. ಈ ಲೋಕದಲ್ಲಿ ಒಳಿತಿನ ನಿಲುಮೆಯನ್ನಿರಿಸಿ ಕೊಂಡವರಿಗೆ ಹಿತವಿದೆ ಮತ್ತು ಅಲ್ಲಾಹನ ಭೂಮಿ ವಿಶಾಲವಾಗಿದೆ. ತಾಳ್ಮೆ ವಹಿಸುವವರಿಗೆ ಅವರ ಪ್ರತಿಫಲವನ್ನು ಅಗಣಿತವಾಗಿ ಕೊಡಲಾಗುವುದು.\"