1 الْحَمْدُ لِلَّهِ الَّذِي لَهُ مَا فِي السَّمَاوَاتِ وَمَا فِي الْأَرْضِ وَلَهُ الْحَمْدُ فِي الْآخِرَةِ ۚ وَهُوَ الْحَكِيمُ الْخَبِيرُ

ಸರ್ವ ಪ್ರಶಂಸೆಗಳೂ ಭೂಮಿ-ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವಿನ ಒಡೆಯ ನಾಗಿರುವ ಅಲ್ಲಾಹನಿಗೆ ಮೀಸಲು ಮತ್ತು ಪರಲೋಕದಲ್ಲೂ ಪ್ರಶಂಸೆಗಳು ಅವನಿಗೇ ಇದೆ. ಅವನು ವಿವೇಕಪೂರ್ಣನೂ ವಿವರಪೂರ್ಣನೂ ಆಗಿರುತ್ತಾನೆ.


2يَعْلَمُ مَا يَلِجُ فِي الْأَرْضِ وَمَا يَخْرُجُ مِنْهَا وَمَا يَنْزِلُ مِنَ السَّمَاءِ وَمَا يَعْرُجُ فِيهَا ۚ وَهُوَ الرَّحِيمُ الْغَفُورُ

ಭೂಮಿಯೊಳಗೆ ಹೋಗುವ ಹಾಗೂ ಅದರೊಳಗಿಂದ ಹೊರಬರುವ ಮತ್ತು ಆಕಾಶದಿಂದ ಇಳಿಯುವ ಹಾಗೂ ಅದರ ಮೇಲೇರುವ ಸಕಲವನ್ನೂ ಅವನು ಬಲ್ಲವನಾಗಿರುತ್ತಾನೆ. ಅವನು ಕರುಣಾನಿಧಿಯೂ ಕ್ಷಮಾಶೀಲನೂ ಆಗಿರುತ್ತಾನೆ.


3وَقَالَ الَّذِينَ كَفَرُوا لَا تَأْتِينَا السَّاعَةُ ۖ قُلْ بَلَىٰ وَرَبِّي لَتَأْتِيَنَّكُمْ عَالِمِ الْغَيْبِ ۖ لَا يَعْزُبُ عَنْهُ مِثْقَالُ ذَرَّةٍ فِي السَّمَاوَاتِ وَلَا فِي الْأَرْضِ وَلَا أَصْغَرُ مِنْ ذَٰلِكَ وَلَا أَكْبَرُ إِلَّا فِي كِتَاب

ನಮ್ಮ ಮೇಲೆ ಪುನರುತ್ಥಾನದ ಫಳಿಗೆ ಬರುವುದಿಲ್ಲವಲ್ಲ ಎಂದು ಸತ್ಯನಿಷೇಧಿಗಳು ಹೇಳುತ್ತಾರೆ. ಹೇಳಿರಿ- \"ಪರೋಕ್ಷ ಜ್ಞಾನಿಯಾದ ನನ್ನ ಪ್ರಭುವಿನಾಣೆಗೂ ಅದು ನಿಮ್ಮ ಮೇಲೆ ಬಂದೇ ತೀರುವುದು. ಆಕಾಶಗಳಲ್ಲಾಗಲಿ, ಭೂಮಿಯಲ್ಲಾಗಲಿ, ಅಣು ಮಾತ್ರದಷ್ಟು ವಸ್ತುವೂ ಅವನಿಂದ ಅಡಗಿರುವುದಿಲ್ಲ. ಅಣುವಿಗಿಂತ ದೊಡ್ಡದೂ ಇಲ್ಲ ಅದಕ್ಕಿಂತ ಚಿಕ್ಕದೂ ಇಲ್ಲ. ಎಲ್ಲವೂ ಒಂದು ಸುಸ್ಪಷ್ಟ ಗ್ರಂಥದಲ್ಲಿ ಲಿಖಿತವಿದೆ.\"


4لِيَجْزِيَ الَّذِينَ آمَنُوا وَعَمِلُوا الصَّالِحَاتِ ۚ أُولَٰئِكَ لَهُمْ مَغْفِرَةٌ وَرِزْقٌ كَرِيمٌ

ಈ ಪುನರುತ್ಥಾನ ದಿನವು ಸತ್ಯವಿಶ್ವಾಸವನ್ನು ಸ್ವೀಕರಿಸಿದವರಿಗೂ ಸತ್ಕರ್ಮಗಳನ್ನೆಸಗಿದವರಿಗೂ ಪ್ರತಿಫಲ ನೀಡಲಿಕ್ಕಾಗಿ ಬರುವುದು. ಅವರಿಗಾಗಿ ಕ್ಷಮೆಯೂ ಸನ್ಮಾನ್ಯ ಜೀವನಾಧಾರವೂ ಇವೆ.


5وَالَّذِينَ سَعَوْا فِي آيَاتِنَا مُعَاجِزِينَ أُولَٰئِكَ لَهُمْ عَذَابٌ مِنْ رِجْزٍ أَلِيمٌ

ನಮ್ಮ ಸೂಕ್ತಗಳನ್ನು ಕೀಳಾಗಿಸಲು ಶ್ರಮಿಸಿದವರಿಗೆ ಅತಿ ನಿಕೃಷ್ಟ ತರದ ವೇದನಾತ್ಮಕ ಯಾತನೆ ಇದೆ.


6وَيَرَى الَّذِينَ أُوتُوا الْعِلْمَ الَّذِي أُنْزِلَ إِلَيْكَ مِنْ رَبِّكَ هُوَ الْحَقَّ وَيَهْدِي إِلَىٰ صِرَاطِ الْعَزِيزِ الْحَمِيدِ

ಪೈಗಂಬರರೇ, ನಿಮ್ಮ ಪ್ರಭುವಿನ ವತಿಯಿಂದ ನಿಮ್ಮ ಮೇಲೆ ಅವತೀರ್ಣಗೊಳಿಸಲ್ಪಟ್ಟಿರುವುದೆಲ್ಲಾ ಪರಮ ಸತ್ಯವೆಂದೂ ಪ್ರಬಲನೂ ಪ್ರಶಂಸಾರ್ಹನೂ ಆದ ಅಲ್ಲಾಹನ ಮಾರ್ಗವನ್ನು ಅದು ತೋರಿಸುತ್ತದೆಂದೂ ಜ್ಞಾನ ನೀಡಲ್ಪಟ್ಟವರು ಚೆನ್ನಾಗಿ ತಿಳಿದಿರುತ್ತಾರೆ.


7وَقَالَ الَّذِينَ كَفَرُوا هَلْ نَدُلُّكُمْ عَلَىٰ رَجُلٍ يُنَبِّئُكُمْ إِذَا مُزِّقْتُمْ كُلَّ مُمَزَّقٍ إِنَّكُمْ لَفِي خَلْقٍ جَدِيدٍ

\"ನಿಮ್ಮ ದೇಹದ ಪ್ರತಿಯೊಂದು ಕಣವೂ ಚೆಲ್ಲಾಪಿಲ್ಲಿಯಾಗಿ ಹೋಗಿ ಬಿಟ್ಟ ಬಳಿಕ ನೀವು ಪುನಃ ಹೊಸತಾಗಿ ಸೃಷ್ಟಿಸಲ್ಪಡುವಿರೆಂಬ ಸುದ್ದಿಯನ್ನು ತಿಳಿಸುವಂತಹ ಒಬ್ಬ ವ್ಯಕ್ತಿಯನ್ನು ನಾವು ನಿಮಗೆ ತೋರಿಸಿಕೊಡಲೇ?


8أَفْتَرَىٰ عَلَى اللَّهِ كَذِبًا أَمْ بِهِ جِنَّةٌ ۗ بَلِ الَّذِينَ لَا يُؤْمِنُونَ بِالْآخِرَةِ فِي الْعَذَابِ وَالضَّلَالِ الْبَعِيدِ

ಇವನು ಅಲ್ಲಾಹನ ಹೆಸರಿನಿಂದ ಸುಳ್ಳನ್ನು ಸೃಷ್ಟಿಸುತ್ತಾನೋ ಅಥವಾ ಇವನಿಗೆ ಹುಚ್ಚು ಹಿಡಿದಿದೆಯೋ ಎಂಬುದು ತಿಳಿಯದು\" ಎಂದು ಸತ್ಯನಿಷೇಧಿಗಳು ಜನರೊಡನೆ ಹೇಳುತ್ತಾರೆ. ಹಾಗಲ್ಲ, ವಾಸ್ತವದಲ್ಲಿ ಪರಲೋಕವನ್ನು ನಂಬದವರು ಯಾತನೆಗೊಳ ಗಾಗುವರು ಮತ್ತು ಅವರೇ ಅತ್ಯಂತ ಪಥಭ್ರಷ್ಟರು.


9أَفَلَمْ يَرَوْا إِلَىٰ مَا بَيْنَ أَيْدِيهِمْ وَمَا خَلْفَهُمْ مِنَ السَّمَاءِ وَالْأَرْضِ ۚ إِنْ نَشَأْ نَخْسِفْ بِهِمُ الْأَرْضَ أَوْ نُسْقِطْ عَلَيْهِمْ كِسَفًا مِنَ السَّمَاءِ ۚ إِنَّ فِي ذَٰلِكَ لَآيَةً لِكُلِّ عَبْدٍ مُنِيبٍ

ಇವರನ್ನು ಮುಂದಿನಿಂದಲೂ ಹಿಂದಿನಿಂದಲೂ ಸುತ್ತುವರಿದುಕೊಂಡಿರುವ ಭೂಮಿ-ಆಕಾಶಗಳನ್ನು ಇವರೆಂದೂ ಕಂಡಿಲ್ಲವೇ? ನಾವಿಷ್ಟಪಟ್ಟರೆ ಇವರನ್ನು ಭೂಮಿಯಲ್ಲಿ ಹುಗಿದು ಬಿಡುವೆವು ಅಥವಾ ಆಕಾಶದ ಕೆಲವು ತುಂಡುಗಳನ್ನು ಇವರ ಮೇಲೆ ಬೀಳಿಸಿ ಬಿಡುವೆವು. ವಾಸ್ತವದಲ್ಲಿ ಪಶ್ಚಾತ್ತಾಪಪಟ್ಟು ಅಲ್ಲಾಹನ ಕಡೆಗೆ ಮರಳು ವಂತಹ ಪ್ರತಿಯೊಬ್ಬ ದಾಸನಿಗೂ ಇದರಲ್ಲೊಂದು ನಿದರ್ಶನವಿದೆ.


10وَلَقَدْ آتَيْنَا دَاوُودَ مِنَّا فَضْلًا ۖ يَا جِبَالُ أَوِّبِي مَعَهُ وَالطَّيْرَ ۖ وَأَلَنَّا لَهُ الْحَدِيدَ

ನಾವು ದಾವೂದರಿಗೆ ನಮ್ಮ ಕಡೆಯಿಂದ ಮಹಾ ಅನುಗ್ರಹ ಪ್ರದಾನ ಮಾಡಿದ್ದೆವು. \"ಪರ್ವತಗಳೇ, ಇವರೊಡನೆ ಸಾಮರಸ್ಯ ಹೊಂದಿರಿ\" (ಎಂದು ನಾವು ಅಪ್ಪಣೆ ಕೊಟ್ಟೆವು ಮತ್ತು ಇದೇ ಆಜ್ಞೆಯನ್ನು) ಪಕ್ಷಿಗಳಿಗೆ ಕೊಟ್ಟೆವು. ನಾವು ಅವರಿಗಾಗಿ ಕಬ್ಬಿಣವನ್ನು ಮೃದುಗೊಳಿಸಿದೆವು.