1 يَا أَيُّهَا النَّبِيُّ اتَّقِ اللَّهَ وَلَا تُطِعِ الْكَافِرِينَ وَالْمُنَافِقِينَ ۗ إِنَّ اللَّهَ كَانَ عَلِيمًا حَكِيمًا

ಪೈಗಂಬರರೇ, ಅಲ್ಲಾಹನನ್ನು ಭಯಪಡಿರಿ ಮತ್ತು ಸತ್ಯನಿಷೇಧಿಗಳ ಹಾಗೂ ಕಪಟ ವಿಶ್ವಾಸಿಗಳ ಅನುಸರಣೆ ಮಾಡಬೇಡಿರಿ. ವಾಸ್ತವದಲ್ಲಿ ಸರ್ವಜ್ಞನೂ ಯುಕ್ತಿಪೂರ್ಣನೂ ಅಲ್ಲಾಹನೇ ಆಗಿರುತ್ತಾನೆ.


2وَاتَّبِعْ مَا يُوحَىٰ إِلَيْكَ مِنْ رَبِّكَ ۚ إِنَّ اللَّهَ كَانَ بِمَا تَعْمَلُونَ خَبِيرًا

ನಿಮ್ಮ ಪ್ರಭುವಿನ ಕಡೆಯಿಂದ ನಿಮಗೆ ನೀಡಲಾಗುತ್ತಿರುವ ಬೋಧನೆಯನ್ನು ಅನುಸರಿಸಿರಿ. ಅಲ್ಲಾಹನು, ನೀವು ಮಾಡುತ್ತಿರುವ ಪ್ರತಿಯೊಂದು ಕಾರ್ಯದ ಅರಿವುಳ್ಳವನಾಗಿದ್ದಾನೆ-


3وَتَوَكَّلْ عَلَى اللَّهِ ۚ وَكَفَىٰ بِاللَّهِ وَكِيلًا

ಮತ್ತು ಅಲ್ಲಾಹನ ಮೇಲೆಯೇ ಭರವಸೆಯನ್ನಿಡಿರಿ. ಕಾರ್ಯ ನಿರ್ವಾಹಕನಾಗಲು ಅಲ್ಲಾಹನೇ ಸಾಕು.


4مَا جَعَلَ اللَّهُ لِرَجُلٍ مِنْ قَلْبَيْنِ فِي جَوْفِهِ ۚ وَمَا جَعَلَ أَزْوَاجَكُمُ اللَّائِي تُظَاهِرُونَ مِنْهُنَّ أُمَّهَاتِكُمْ ۚ وَمَا جَعَلَ أَدْعِيَاءَكُمْ أَبْنَاءَكُمْ ۚ ذَٰلِكُمْ قَوْلُكُمْ بِأَفْوَاهِكُمْ ۖ وَاللَّهُ يَقُولُ الْحَقَّ وَه

ಅಲ್ಲಾಹನು ಯಾವ ಮನುಷ್ಯನ ಶರೀರದೊಳಗೂ ಎರಡು ಹೃದಯಗಳನ್ನಿರಿಸಿಲ್ಲ. ನೀವು \'ಝಿಹಾರ್\' ಮಾಡುವ ನಿಮ್ಮ ಪತ್ನಿಯರನ್ನು ಅವನು ನಿಮ್ಮ ತಾಯಂದಿರನ್ನಾಗಿ ಮಾಡಲೂ ಇಲ್ಲ ಮತ್ತು ಅವನು ನಿಮ್ಮ ದತ್ತುಪುತ್ರರನ್ನು ನಿಮ್ಮ ಸ್ವಂತ ಪುತ್ರರನ್ನಾಗಿ ಮಾಡಿರುವುದೂ ಇಲ್ಲ. ಇವೆಲ್ಲ ನೀವು ನಿಮ್ಮ ಬಾಯಿಯಿಂದ ಹೊರಡಿಸಿ ಬಿಡುವ ಮಾತುಗಳು. ಆದರೆ ಅಲ್ಲಾಹನು ಕೇವಲ ಯಥಾರ್ಥವಾದುದನ್ನೇ ಹೇಳುತ್ತಾನೆ. ಅವನೇ ಸನ್ಮಾರ್ಗದ ಕಡೆಗೆ ಮಾರ್ಗದರ್ಶನ ನೀಡುತ್ತಾನೆ.


5ادْعُوهُمْ لِآبَائِهِمْ هُوَ أَقْسَطُ عِنْدَ اللَّهِ ۚ فَإِنْ لَمْ تَعْلَمُوا آبَاءَهُمْ فَإِخْوَانُكُمْ فِي الدِّينِ وَمَوَالِيكُمْ ۚ وَلَيْسَ عَلَيْكُمْ جُنَاحٌ فِيمَا أَخْطَأْتُمْ بِهِ وَلَٰكِنْ مَا تَعَمَّدَتْ قُلُوبُكُمْ ۚ وَكَانَ اللَّهُ غَفُور

ದತ್ತು ಮಕ್ಕಳನ್ನು ಅವರ ಪಿತರಿಗೆ ಸಂಬಂಧಿಸಿ ಕರೆಯಿರಿ. ಇದು ಅಲ್ಲಾಹನ ಬಳಿ ಹೆಚ್ಚು ನ್ಯಾಯೋಚಿತವಾದ ವಿಷಯವಾಗಿದೆ ಮತ್ತು ನಿಮಗೆ ಅವರ ಪಿತರು ಯಾರೆಂದು ತಿಳಿದಿರದಿದ್ದರೆ ಅವರು ನಿಮ್ಮ ಧರ್ಮ ಸಹೋದರರು ಮತ್ತು ಮಿತ್ರರಾಗಿರುತ್ತಾರೆ. ನೀವು ತಿಳಿಯದೆ ಹೇಳಿ ಬಿಟ್ಟ ಮಾತಿಗಾಗಿ ನಿಮ್ಮ ಮೇಲೇನೂ ದೋಷವಿಲ್ಲ. ಆದರೂ ನೀವು ಉದ್ದೇಶಪೂರ್ವಕವಾಗಿ ಹೇಳಿದ ಮಾತಿನ ಬಗ್ಗೆ ಖಂಡಿತ ದೋಷವಿದೆ. ಅಲ್ಲಾಹ್ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.


6النَّبِيُّ أَوْلَىٰ بِالْمُؤْمِنِينَ مِنْ أَنْفُسِهِمْ ۖ وَأَزْوَاجُهُ أُمَّهَاتُهُمْ ۗ وَأُولُو الْأَرْحَامِ بَعْضُهُمْ أَوْلَىٰ بِبَعْضٍ فِي كِتَابِ اللَّهِ مِنَ الْمُؤْمِنِينَ وَالْمُهَاجِرِينَ إِلَّا أَنْ تَفْعَلُوا إِلَىٰ أَوْلِيَائِكُمْ مَعْرُو

ನಿಶ್ಚಯವಾಗಿಯೂ ಪ್ರವಾದಿಯು ಸತ್ಯವಿಶ್ವಾಸಿಗಳಿಗೆ ಅವರ ಸ್ವಂತ ಅಸ್ತಿತ್ವಕ್ಕಿಂತಲೂ ಪ್ರಧಾನರಾಗಿದ್ದಾರೆ ಮತ್ತು ಪ್ರವಾದಿಯ ಪತ್ನಿಯರು ಅವರ ಮಾತೆಯರಾಗಿದ್ದಾರೆ. ಆದರೆ ದೇವ ಗ್ರಂಥದ ದೃಷ್ಟಿಯಿಂದ ಸಾಮಾನ್ಯ ಸತ್ಯವಿಶ್ವಾಸಿಗಳು ಹಾಗೂ ಮುಹಾಜಿರರಿಗಿಂತಲೂ ಸಂಬಂಧಿಕರು ಪರಸ್ಪರರ ಪಾಲಿಗೆ ಅಧಿಕ ಹಕ್ಕುದಾರರಾಗಿದ್ದಾರೆ. ಆದರೆ, ತಮ್ಮ ಮಿತ್ರರೊಂದಿಗೆ ನೀವೇನಾದರೂ ಒಳಿತು (ಮಾಡಲಿಚ್ಛಿಸುತ್ತೀರಾದರೆ) ಮಾಡಬಹುದು. ಈ ಆಜ್ಞೆಯು ದೇವಗ್ರಂಥದಲ್ಲಿ ಬರೆದಿದೆ.


7وَإِذْ أَخَذْنَا مِنَ النَّبِيِّينَ مِيثَاقَهُمْ وَمِنْكَ وَمِنْ نُوحٍ وَإِبْرَاهِيمَ وَمُوسَىٰ وَعِيسَى ابْنِ مَرْيَمَ ۖ وَأَخَذْنَا مِنْهُمْ مِيثَاقًا غَلِيظًا

ಮತ್ತು (ಪೈಗಂಬರರೇ) ನಾವು ಎಲ್ಲ ಪ್ರವಾದಿಗಳಿಂದ ಪಡೆದಿರುವ ಕರಾರನ್ನು ನೆನಪಿಡಿರಿ. ನಿಮ್ಮಿಂದಲೂ ನೂಹ್, ಇಬ್ರಾಹೀಮ್, ಮೂಸಾ ಮತ್ತು ಮರ್ಯಮರ ಪುತ್ರ ಈಸಾರಿಂದಲೂ -ಎಲ್ಲರಿಂದಲೂ ನಾವು ಬಲವಾದ ಕರಾರನ್ನು ಪಡೆದಿರುತ್ತೇವೆ.


8لِيَسْأَلَ الصَّادِقِينَ عَنْ صِدْقِهِمْ ۚ وَأَعَدَّ لِلْكَافِرِينَ عَذَابًا أَلِيمًا

(ಇದು, ಅವರ ಪ್ರಭು) ಸತ್ಯಸಂಧರಿಂದ ಅವರ ಸತ್ಯಸಂಧತೆಯ ಕುರಿತು ಪ್ರಶ್ನಿಸಲಿಕ್ಕಾಗಿ (ಆಗಿರುತ್ತದೆ) ಮತ್ತು ಸತ್ಯನಿಷೇಧಿಗಳಿಗಾಗಿ ಅವನು ವೇದನಾಯುಕ್ತ ಯಾತನೆಯನ್ನು ಸಿದ್ಧಪಡಿಸಿಯೇ ಇಟ್ಟಿದ್ದಾನೆ.


9يَا أَيُّهَا الَّذِينَ آمَنُوا اذْكُرُوا نِعْمَةَ اللَّهِ عَلَيْكُمْ إِذْ جَاءَتْكُمْ جُنُودٌ فَأَرْسَلْنَا عَلَيْهِمْ رِيحًا وَجُنُودًا لَمْ تَرَوْهَا ۚ وَكَانَ اللَّهُ بِمَا تَعْمَلُونَ بَصِيرًا

ಸತ್ಯವಿಶ್ವಾಸಿಗಳೇ, ಅಲ್ಲಾಹನು(ಇದೀಗ) ನಿಮಗೆ ಮಾಡಿರುವ ಉಪಕಾರವನ್ನು ಸ್ಮರಿಸಿರಿ. ನಿಮ್ಮ ಮೇಲೆ ಸೈನ್ಯಗಳು ಏರಿ ಬಂದಾಗ ನಾವು ಅವರ ಮೇಲೆ ಒಂದು ಬಲವಾದ ಬಿರುಗಾಳಿಯನ್ನು ಕಳುಹಿಸಿದೆವು ಮತ್ತು ನಿಮಗೆ ಕಾಣಿಸದಂತಹ ಸೈನ್ಯಗಳನ್ನು ರವಾನಿಸಿದೆವು. ನೀವು ಆಗ ಮಾಡುತ್ತಿದ್ದುದನ್ನೆಲ್ಲ ಅಲ್ಲಾಹನು ನೋಡುತ್ತಿದ್ದನು.


10إِذْ جَاءُوكُمْ مِنْ فَوْقِكُمْ وَمِنْ أَسْفَلَ مِنْكُمْ وَإِذْ زَاغَتِ الْأَبْصَارُ وَبَلَغَتِ الْقُلُوبُ الْحَنَاجِرَ وَتَظُنُّونَ بِاللَّهِ الظُّنُونَا

ಶತ್ರುಗಳು ಮೇಲಿಂದಲೂ ಕೆಳಗಿಂದಲೂ ನಿಮ್ಮ ಮೇಲೆ ಏರಿ ಬಂದಾಗ, ಭಯದಿಂದ ಕಣ್ಣುಗಳು ನಿಶ್ಚಲಗೊಂಡಾಗ, ಹೃದಯಗಳು ಬಾಯಿಗೆ ಬಂದಾಗ ಮತ್ತು ನೀವು ಅಲ್ಲಾಹನ ವಿಷಯದಲ್ಲಿ ತರತರದ ಗುಮಾನಿಗಳನ್ನಿರಿಸಲು ತೊಡಗಿದಾಗ,