1 الم

ಅಲಿಫ್ ಲಾಮ್ಮೀಮ್.


2غُلِبَتِ الرُّومُ

ರೋಮನರು ಪರಾಜಿತರಾದರು.


3فِي أَدْنَى الْأَرْضِ وَهُمْ مِنْ بَعْدِ غَلَبِهِمْ سَيَغْلِبُونَ

ಸಮೀಪದ ಭೂಭಾಗದಲ್ಲಿ, ಮತ್ತು ತಮ್ಮ ಈ ಪರಾಜಯದ ತರುವಾಯ ಅವರು ವಿಜಯಿಗಳಾಗುವರು.


4فِي بِضْعِ سِنِينَ ۗ لِلَّهِ الْأَمْرُ مِنْ قَبْلُ وَمِنْ بَعْدُ ۚ وَيَوْمَئِذٍ يَفْرَحُ الْمُؤْمِنُونَ

ಕೆಲವೇ ವರ್ಷಗಳಲ್ಲಿ, ಹಿಂದೆಯೂ ಇನ್ನು ಮುಂದೆಯೂ ಅಲ್ಲಾಹನದೇ ಪ್ರಭುತ್ವವಿದೆ. ಆ ದಿನವು ಮುಸ್ಲಿಮರು ಸಂತೋಷವನ್ನಾಚರಿಸುವ ದಿನವಾಗಿರುವುದು.


5بِنَصْرِ اللَّهِ ۚ يَنْصُرُ مَنْ يَشَاءُ ۖ وَهُوَ الْعَزِيزُ الرَّحِيمُ

ಅಲ್ಲಾಹ್ ದಯಪಾಲಿಸಿದ ವಿಜಯಕ್ಕಾಗಿ, ಅಲ್ಲಾಹನು ತಾನಿಚ್ಛಿಸಿದವರಿಗೆ ಸಹಾಯ ನೀಡುತ್ತಾನೆ ಮತ್ತು ಅವನು ಮಹಾ ಪ್ರಬಲನೂ ಕರುಣಾನಿಧಿಯೂ ಆಗಿರುತ್ತಾನೆ.


6وَعْدَ اللَّهِ ۖ لَا يُخْلِفُ اللَّهُ وَعْدَهُ وَلَٰكِنَّ أَكْثَرَ النَّاسِ لَا يَعْلَمُونَ

ಇದು ಅಲ್ಲಾಹನು ಮಾಡಿದ ವಾಗ್ದಾನ. ಅಲ್ಲಾಹನು ಎಂದೂ ತನ್ನ ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ. ಆದರೆ ಹೆಚ್ಚಿನವರು ತಿಳಿಯುವುದಿಲ್ಲ.


7يَعْلَمُونَ ظَاهِرًا مِنَ الْحَيَاةِ الدُّنْيَا وَهُمْ عَنِ الْآخِرَةِ هُمْ غَافِلُونَ

ಜನರು ಲೌಕಿಕ ಜೀವನದ ಬಾಹ್ಯ ಮುಖವನ್ನು ಮಾತ್ರ ತಿಳಿಯುತ್ತಾರೆ ಮತ್ತು ಪರಲೋಕದ ಕುರಿತು ಸ್ವಯಂ ಬೋಧ ಶೂನ್ಯರಾಗಿದ್ದಾರೆ.


8أَوَلَمْ يَتَفَكَّرُوا فِي أَنْفُسِهِمْ ۗ مَا خَلَقَ اللَّهُ السَّمَاوَاتِ وَالْأَرْضَ وَمَا بَيْنَهُمَا إِلَّا بِالْحَقِّ وَأَجَلٍ مُسَمًّى ۗ وَإِنَّ كَثِيرًا مِنَ النَّاسِ بِلِقَاءِ رَبِّهِمْ لَكَافِرُونَ

ಇವರೆಂದಾದರೂ ಸ್ವಯಂ ತಮ್ಮ ಕುರಿತಾಗಿ ವಿವೇಚಿಸಲಿಲ್ಲವೇ? ಅಲ್ಲಾಹನು ಆಕಾಶಗಳನ್ನೂ ಭೂಮಿಯನ್ನೂ ಅವುಗಳ ನಡುವೆ ಇರುವುದೆಲ್ಲವನ್ನೂ ಸತ್ಯ ಪೂರ್ಣವಾಗಿ ಮತ್ತು ಒಂದು ನಿರ್ದಿಷ್ಟ ಕಾಲಾವಧಿಗಾಗಿಯೇ ಸೃಷ್ಟಿಸಿದ್ದಾನೆ. ಆದರೆ ಅನೇಕರು ತಮ್ಮ ಪ್ರಭುವಿನ ಭೇಟಿಯನ್ನು ನಿರಾಕರಿಸುವವರಾಗಿರುತ್ತಾರೆ.


9أَوَلَمْ يَسِيرُوا فِي الْأَرْضِ فَيَنْظُرُوا كَيْفَ كَانَ عَاقِبَةُ الَّذِينَ مِنْ قَبْلِهِمْ ۚ كَانُوا أَشَدَّ مِنْهُمْ قُوَّةً وَأَثَارُوا الْأَرْضَ وَعَمَرُوهَا أَكْثَرَ مِمَّا عَمَرُوهَا وَجَاءَتْهُمْ رُسُلُهُمْ بِالْبَيِّنَاتِ ۖ فَمَا كَانَ الل

ಇವರಿಗಿಂತ ಮುಂಚೆ ಗತಿಸಿ ಹೋದವರ ಅಂತಿಮ ಪರಿಣಾಮ ಏನಾಯಿತೆಂದು ನೋಡಲು ಇವರೆಂದೂ ಭೂಮಿಯ ಮೇಲೆ ಸಂಚರಿಸಲಿಲ್ಲವೇ? ಅವರು ಇವರಿಗಿಂತಲೂ ಹೆಚ್ಚು ಬಲಶಾಲಿಗಳಾಗಿದ್ದರು. ಅವರು ಭೂಮಿಯನ್ನು ಚೆನ್ನಾಗಿ ಅಗೆದಿದ್ದರು ಮತ್ತು ಅದನ್ನು ಇವರು ಮಾಡಿರುವುದಕ್ಕಿಂತ ಅಧಿಕ ಸಮೃದ್ಧವಾಗಿ ಮಾಡಿದ್ದರು. ಅವರ ಬಳಿಗೆ ಅವರ ಸಂದೇಶವಾಹಕರು ಸುವ್ಯಕ್ತ ನಿದರ್ಶನಗಳನ್ನು ತಂದರು. ಅಲ್ಲಾಹನು ಅವರ ಮೇಲೆ ಅಕ್ರಮವೆಸಗುವವನಾಗಿರಲಿಲ್ಲ. ಆದರೆ ಅವರು ತಾವೇ ತಮ್ಮ ಮೇಲೆ ಅಕ್ರಮವೆಸಗುತ್ತಿದ್ದರು.


10ثُمَّ كَانَ عَاقِبَةَ الَّذِينَ أَسَاءُوا السُّوأَىٰ أَنْ كَذَّبُوا بِآيَاتِ اللَّهِ وَكَانُوا بِهَا يَسْتَهْزِئُونَ

ಕೊನೆಗೆ ಪಾಪಕರ್ಮಗಳನ್ನು ಎಸಗಿದ್ದವರ ಪರಿಣಾಮವು ಬಹಳ ಕೆಟ್ಟದಾಯಿತು. ಏಕೆಂದರೆ ಅವರು ಅಲ್ಲಾಹನ ಸೂಕ್ತಗಳನ್ನು ಸುಳ್ಳಾಗಿಸಿದ್ದರು ಮತ್ತು ಅವರು ಅವುಗಳನ್ನು ಅಪಹಾಸ್ಯ ಮಾಡುತ್ತಿದ್ದರು.