1 الم

ಅಲಿಫ್ ಲಾಮ್ಮೀಮ್.


2أَحَسِبَ النَّاسُ أَنْ يُتْرَكُوا أَنْ يَقُولُوا آمَنَّا وَهُمْ لَا يُفْتَنُونَ

\"ನಾವು ವಿಶ್ವಾಸವಿರಿಸಿದೆವು\" ಎಂದ ಮಾತ್ರಕ್ಕೆ ಅವರನ್ನು ಬಿಟ್ಟುಬಿಡಲಾಗುವುದೆಂದೂ ಅವರನ್ನು ಪರೀಕ್ಷೆಗೊಳಪಡಿಸಲಾಗದೆಂದೂ ಜನರು ತಿಳಿದುಕೊಂಡಿರುವರೇ?


3وَلَقَدْ فَتَنَّا الَّذِينَ مِنْ قَبْلِهِمْ ۖ فَلَيَعْلَمَنَّ اللَّهُ الَّذِينَ صَدَقُوا وَلَيَعْلَمَنَّ الْكَاذِبِينَ

ವಸ್ತುತಃ ನಾವು ಇವರಿಗಿಂತ ಮುಂಚೆ ಗತಿಸಿ ಹೋದವರನ್ನು ಪರೀಕ್ಷೆಗೊಳಪಡಿಸಿದ್ದೆವು. ಯಾರು ಸತ್ಯವಾದಿಗಳು ಮತ್ತು ಯಾರು ಸುಳ್ಳುಗಾರರೆಂದು ಅಲ್ಲಾಹನಿಗೆ ನಿಶ್ಚಯವಾಗಿಯೂ ನೋಡಬೇಕಾಗಿದೆ.


4أَمْ حَسِبَ الَّذِينَ يَعْمَلُونَ السَّيِّئَاتِ أَنْ يَسْبِقُونَا ۚ سَاءَ مَا يَحْكُمُونَ

ದುಷ್ಕರ್ಮವೆಸಗುತ್ತಿರುವವರು, ಅವರು ನಮ್ಮನ್ನು ಸೋಲಿಸುವರೆಂದು ಭಾವಿಸುತ್ತಿದ್ದಾರೆಯೇ? ಮಹಾ ತಪ್ಪು ತೀರ್ಮಾನವನ್ನು ಅವರು ಕೈಗೊಳ್ಳುತ್ತಿದ್ದಾರೆ.


5مَنْ كَانَ يَرْجُو لِقَاءَ اللَّهِ فَإِنَّ أَجَلَ اللَّهِ لَآتٍ ۚ وَهُوَ السَّمِيعُ الْعَلِيمُ

ಅಲ್ಲಾಹನ ಭೇಟಿಯನ್ನು ನಿರೀಕ್ಷಿಸುತ್ತಿರುವವನು ಅಲ್ಲಾಹನು ನಿಗದಿಗೊಳಿಸಿರುವ ಸಮಯವು ಖಂಡಿತವಾಗಿಯೂ ಬರಲಿದೆ(ಎಂದು ತಿಳಿದಿರಬೇಕು) ಮತ್ತು ಅಲ್ಲಾಹನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.


6وَمَنْ جَاهَدَ فَإِنَّمَا يُجَاهِدُ لِنَفْسِهِ ۚ إِنَّ اللَّهَ لَغَنِيٌّ عَنِ الْعَالَمِينَ

ಹೋರಾಟ ನಡೆಸುವವನು ತನ್ನ ಹಿತಕ್ಕಾಗಿಯೇ ನಡೆಸುವನು. ನಿಶ್ಚಯವಾಗಿಯೂ ಅಲ್ಲಾಹ್ ಸಕಲ ಲೋಕದವರಿಂದ ನಿರಪೇಕ್ಷನು.


7وَالَّذِينَ آمَنُوا وَعَمِلُوا الصَّالِحَاتِ لَنُكَفِّرَنَّ عَنْهُمْ سَيِّئَاتِهِمْ وَلَنَجْزِيَنَّهُمْ أَحْسَنَ الَّذِي كَانُوا يَعْمَلُونَ

ಮತ್ತು ಸತ್ಯವಿಶ್ವಾಸವಿರಿಸುವವರ ಮತ್ತು ಸತ್ಕರ್ಮವೆಸಗುವವರ ಪಾಪಗಳನ್ನು ನಾವು ಅವರಿಂದ ದೂರೀಕರಿಸುವೆವು ಮತ್ತು ಅವರಿಗೆ ಅವರ ಅತ್ಯುತ್ತಮ ಕರ್ಮಗಳ ಸತ್ಫಲ ನೀಡುವೆವು.


8وَوَصَّيْنَا الْإِنْسَانَ بِوَالِدَيْهِ حُسْنًا ۖ وَإِنْ جَاهَدَاكَ لِتُشْرِكَ بِي مَا لَيْسَ لَكَ بِهِ عِلْمٌ فَلَا تُطِعْهُمَا ۚ إِلَيَّ مَرْجِعُكُمْ فَأُنَبِّئُكُمْ بِمَا كُنْتُمْ تَعْمَلُونَ

ತನ್ನ ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ನಾವು ಮಾನವನಿಗೆ ಉಪದೇಶಿಸಿದೆವು. ಆದರೆ (ನನ್ನ ಸಹಭಾಗಿಯೆಂದು) ನೀನು ಅರಿಯದಿರುವ ಯಾವುದಾದರೊಂದನ್ನು (ಆರಾಧ್ಯನನ್ನು) ನನ್ನ ಸಹಭಾಗಿಯನ್ನಾಗಿ ಮಾಡಬೇಕೆಂದು ಅವರು ನಿನ್ನ ಮೇಲೆ ಒತ್ತಡ ಹಾಕಿದರೆ, ಅವರನ್ನು ಅನುಸರಿಸಬೇಡ. ನೀವೆಲ್ಲರೂ ನನ್ನ ಕಡೆಗೇ ಮರಳಿ ಬರಬೇಕಾಗಿದೆ. ಆಗ ನೀವು ಏನು ಮಾಡುತ್ತಿದ್ದಿರಿ ಎಂಬುದನ್ನು ನಾನು ನಿಮಗೆ ತೋರಿಸಿ ಕೊಡುವೆನು.


9وَالَّذِينَ آمَنُوا وَعَمِلُوا الصَّالِحَاتِ لَنُدْخِلَنَّهُمْ فِي الصَّالِحِينَ

ಸತ್ಯವಿಶ್ವಾಸ ಸ್ವೀಕಾರ ಮಾಡಿದವರನ್ನು ಮತ್ತು ಸತ್ಕರ್ಮವೆಸಗಿದವರನ್ನು ನಾವು ಖಂಡಿತ ಸಜ್ಜನರ ಸಾಲಿಗೆ ಸೇರಿಸಿಕೊಳ್ಳುವೆವು.


10وَمِنَ النَّاسِ مَنْ يَقُولُ آمَنَّا بِاللَّهِ فَإِذَا أُوذِيَ فِي اللَّهِ جَعَلَ فِتْنَةَ النَّاسِ كَعَذَابِ اللَّهِ وَلَئِنْ جَاءَ نَصْرٌ مِنْ رَبِّكَ لَيَقُولُنَّ إِنَّا كُنَّا مَعَكُمْ ۚ أَوَلَيْسَ اللَّهُ بِأَعْلَمَ بِمَا فِي صُدُورِ الْعَالَمِي

ನಾವು ಅಲ್ಲಾಹನ ಮೇಲೆ ವಿಶ್ವಾಸವಿರಿಸಿದ್ದೇವೆಂದು ಹೇಳುವವನು ಜನರಲ್ಲಿದ್ದಾನೆ ಆದರೆ, ಅವನು ಅಲ್ಲಾಹನ ವಿಷಯದಲ್ಲಿ ಸತಾಯಿಸಲ್ಪಟ್ಟಾಗ ಜನರ ಕಡೆಯಿಂದ ಬರುವಂತಹ ಪರೀಕ್ಷೆಯನ್ನು ಅಲ್ಲಾಹನ ಯಾತನೆಯಂತೆ ಗ್ರಹಿಸಿಕೊಂಡನು ನಿನ್ನ ಪ್ರಭುವಿನ ಕಡೆಯಿಂದ ಸಹಾಯವೊದಗಿದಾಗ ಇವನೇ, \"ನಾವಂತೂ ನಿಮ್ಮ ಜೊತೆಗಿದ್ದೆವು\"ಎಂದು ಹೇಳುವನು. ಲೋಕವಾಸಿಗಳ ಮನಸ್ಸಿನ ಸ್ಥಿತಿಯು ಅಲ್ಲಾಹನಿಗೆ ಚೆನ್ನಾಗಿ ತಿಳಿದಿಲ್ಲವೇ?