1 طسم

ತಾ ಸೀ ಮ್ಮೀಮ್.


2تِلْكَ آيَاتُ الْكِتَابِ الْمُبِينِ

ಇವು ಸುವ್ಯಕ್ತ ಗ್ರಂಥದ ಸೂಕ್ತಗಳು.


3نَتْلُو عَلَيْكَ مِنْ نَبَإِ مُوسَىٰ وَفِرْعَوْنَ بِالْحَقِّ لِقَوْمٍ يُؤْمِنُونَ

ನಾವು ನಿಮಗೆ ಮೂಸಾ ಮತ್ತು ಫಿರ್ಔುನರ ಕೆಲವು ವೃತ್ತಾಂತಗಳನ್ನು ನಿಖರವಾಗಿ ತಿಳಿಸುತ್ತೇವೆ- ಸತ್ಯವಿಶ್ವಾಸ ಸ್ವೀಕರಿಸುವವರ ಪ್ರಯೋಜನಕ್ಕಾಗಿ.


4إِنَّ فِرْعَوْنَ عَلَا فِي الْأَرْضِ وَجَعَلَ أَهْلَهَا شِيَعًا يَسْتَضْعِفُ طَائِفَةً مِنْهُمْ يُذَبِّحُ أَبْنَاءَهُمْ وَيَسْتَحْيِي نِسَاءَهُمْ ۚ إِنَّهُ كَانَ مِنَ الْمُفْسِدِينَ

ವಿಷಯವೇನೆಂದರೆ- ಫಿರ್ಔಕನನು ಭೂಮಿಯಲ್ಲಿ ಬಂಡಾಯವೆದ್ದನು ಮತ್ತು ಅದರ ನಿವಾಸಿಗಳನ್ನು ಪಂಗಡಗಳಾಗಿ ವಿಂಗಡಿಸಿಬಿಟ್ಟನು. ಆ ಪೈಕಿ ಒಂದು ಪಂಗಡವನ್ನು ಅವನು ಅವಮಾನಿಸುತ್ತಿದ್ದನು. ಅವರ ಗಂಡು ಮಕ್ಕಳನ್ನು ವಧಿಸುತ್ತಿದ್ದನು ಮತ್ತು ಹೆಣ್ಣು ಮಕ್ಕಳನ್ನು ಬದುಕಿರಲು ಬಿಡುತ್ತಿದ್ದನು. ನಿಜಕ್ಕೂ ಅವನು ದಂಗೆಕೋರರಲ್ಲಾಗಿದ್ದನು.


5وَنُرِيدُ أَنْ نَمُنَّ عَلَى الَّذِينَ اسْتُضْعِفُوا فِي الْأَرْضِ وَنَجْعَلَهُمْ أَئِمَّةً وَنَجْعَلَهُمُ الْوَارِثِينَ

ನಾವು ಭೂಮಿಯಲ್ಲಿ ತುಳಿಯಲ್ಪಟ್ಟವರ ಮೇಲೆ ಕೃಪೆ ತೋರಬೇಕೆಂದೂ ಅವರನ್ನು ನಾಯಕರಾಗಿ ಮಾಡಿ ಬಿಡಬೇಕೆಂದೂ ಅವರನ್ನೇ ಉತ್ತರಾಧಿಕಾರಿಗಳಾಗಿ ಮಾಡ ಬೇಕೆಂದೂ-


6وَنُمَكِّنَ لَهُمْ فِي الْأَرْضِ وَنُرِيَ فِرْعَوْنَ وَهَامَانَ وَجُنُودَهُمَا مِنْهُمْ مَا كَانُوا يَحْذَرُونَ

ಭೂಮಿಯಲ್ಲಿ ಅವರಿಗೆ ಪ್ರಭುತ್ವ ನೀಡಬೇಕೆಂದೂ ಫಿರ್ಔುನ್, ಹಾಮಾನ್ ಮತ್ತು ಅವರ ಸೇನೆಗಳಿಗೆ ಯಾವುದರ ಭಯವಿತ್ತೋ ಅದನ್ನೇ ತೋರಿಸಿಕೊಡಬೇಕೆಂದೂ ಬಯಸಿದ್ದೆವು.


7وَأَوْحَيْنَا إِلَىٰ أُمِّ مُوسَىٰ أَنْ أَرْضِعِيهِ ۖ فَإِذَا خِفْتِ عَلَيْهِ فَأَلْقِيهِ فِي الْيَمِّ وَلَا تَخَافِي وَلَا تَحْزَنِي ۖ إِنَّا رَادُّوهُ إِلَيْكِ وَجَاعِلُوهُ مِنَ الْمُرْسَلِينَ

ನಾವು ಮೂಸಾರ ತಾಯಿಗೆ, \"ಇದಕ್ಕೆ ಮೊಲೆ ಹಾಲುಣಿಸು. ಮುಂದೆ ನಿನಗೆ ಇದರ ಪ್ರಾಣದ ಬಗ್ಗೆ ಭಯವುಂಟಾದರೆ ಇದನ್ನು ನದಿಯಲ್ಲಿ ಹಾಕಿ ಬಿಡು. ನೀನು ಕೊಂಚವೂ ಭಯಪಡಬೇಡ. ವ್ಯಥೆ ಪಡಬೇಡ. ನಾವು ಇದನ್ನು ನಿನ್ನ ಬಳಿಗೇ ಮರಳಿ ತರುವೆವು ಮತ್ತು ಇದನ್ನು ಸಂದೇಶವಾಹಕರಲ್ಲಿ ಸೇರಿಸುವೆವು\" ಎಂದು ಸೂಚನೆ ನೀಡಿದೆವು.


8فَالْتَقَطَهُ آلُ فِرْعَوْنَ لِيَكُونَ لَهُمْ عَدُوًّا وَحَزَنًا ۗ إِنَّ فِرْعَوْنَ وَهَامَانَ وَجُنُودَهُمَا كَانُوا خَاطِئِينَ

ಕೊನೆಗೆ ಫಿರ್ಔ ನನ ಮನೆಯವರು- ತಮ್ಮ ಶತ್ರುವಾಗಲು ಮತ್ತು ತಮ್ಮ ವ್ಯಥೆಗೆ ಕಾರಣವಾಗಲು ಅದನ್ನು (ನದಿಯಿಂದ) ಎತ್ತಿಕೊಂಡರು. ನಿಜಕ್ಕೂ ಫಿರ್ಔ್ನನೂ ಹಾಮಾನನೂ ಅವನ ಸೇನೆಗಳೂ (ತಮ್ಮ ತಂತ್ರದಲ್ಲಿ) ತಪ್ಪಿ ಬಿದ್ದಿದ್ದರು.


9وَقَالَتِ امْرَأَتُ فِرْعَوْنَ قُرَّتُ عَيْنٍ لِي وَلَكَ ۖ لَا تَقْتُلُوهُ عَسَىٰ أَنْ يَنْفَعَنَا أَوْ نَتَّخِذَهُ وَلَدًا وَهُمْ لَا يَشْعُرُونَ

ಫಿರ್ಔಲನನ ಪತ್ನಿಯು (ಅವನೊಡನೆ) \"ಇದು ನನಗೂ, ನಿನಗೂ ಕಣ್ಮನಗಳಿಗೆ ತಂಪಾಗಿದೆ. ಇದನ್ನು ವಧಿಸಬೇಡ. ಇದು ನಮಗೆ ಲಾಭದಾಯಕವಾಗಲೂಬಹುದು ಅಥವಾ ನಾವು ಇದನ್ನು ಮಗನಾಗಿ ಮಾಡಿಕೊಳ್ಳಲೂಬಹುದು\" ಎಂದಳು. ಅವರು (ಪರಿಣಾಮದ ಬಗ್ಗೆ) ಅಜ್ಞರಾಗಿದ್ದರು.


10وَأَصْبَحَ فُؤَادُ أُمِّ مُوسَىٰ فَارِغًا ۖ إِنْ كَادَتْ لَتُبْدِي بِهِ لَوْلَا أَنْ رَبَطْنَا عَلَىٰ قَلْبِهَا لِتَكُونَ مِنَ الْمُؤْمِنِينَ

ಅತ್ತ \'ಮೂಸಾ\'ರ ತಾಯಿಯ ಹೃದಯ ತಳಮಳಿಸುತ್ತಿತ್ತು. ಅವಳು (ನಮ್ಮ ವಾಗ್ದಾನದ ಮೇಲೆ) ವಿಶ್ವಾಸವಿರಿಸುವವರಲ್ಲಾಗಲೆಂದು ನಾವು ಅವಳಿಗೆ ಸಾಂತ್ವನ ನೀಡದಿರುತ್ತಿದ್ದರೆ ಅವಳು ಗುಟ್ಟನ್ನು ರಟ್ಟು ಮಾಡಿ ಬಿಡುತ್ತಿದ್ದಳು.