1 تَبَارَكَ الَّذِي نَزَّلَ الْفُرْقَانَ عَلَىٰ عَبْدِهِ لِيَكُونَ لِلْعَالَمِينَ نَذِيرًا

ಈ ಫುರ್ಕಾನನ್ನು ಸಮಸ್ತ ಜಗತ್ತಿನವರಿಗೆ ಎಚ್ಚರಿಕೆಯಾಗಲಿಕ್ಕಾಗಿ- ತನ್ನ ದಾಸನ ಮೇಲೆ ಅವತೀರ್ಣಗೊಳಿಸಿದವನು ಪರಮ ಸುಮಂಗಲನು-


2الَّذِي لَهُ مُلْكُ السَّمَاوَاتِ وَالْأَرْضِ وَلَمْ يَتَّخِذْ وَلَدًا وَلَمْ يَكُنْ لَهُ شَرِيكٌ فِي الْمُلْكِ وَخَلَقَ كُلَّ شَيْءٍ فَقَدَّرَهُ تَقْدِيرًا

ಅವನು ಭೂಮಿ-ಆಕಾಶಗಳ ಪ್ರಭುತ್ವದ ಒಡೆಯನು. ಅವನು ಯಾರನ್ನೂ ಪುತ್ರನಾಗಿಸಿ ಕೊಂಡಿಲ್ಲ. ಅವನ ಜೊತೆ ಪ್ರಭುತ್ವದಲ್ಲಿ ಯಾರೂ ಸಹಭಾಗಿ ಇಲ್ಲ. ಅವನು ಪ್ರತಿಯೊಂದು ವಸ್ತುವನ್ನೂ ಸೃಷ್ಟಿಸಿದನು. ಅನಂತರ ಅದಕ್ಕೊಂದು ವಿಧಿ ನಿಯಮವನ್ನು ನಿಶ್ಚಯಿಸಿದನು.


3وَاتَّخَذُوا مِنْ دُونِهِ آلِهَةً لَا يَخْلُقُونَ شَيْئًا وَهُمْ يُخْلَقُونَ وَلَا يَمْلِكُونَ لِأَنْفُسِهِمْ ضَرًّا وَلَا نَفْعًا وَلَا يَمْلِكُونَ مَوْتًا وَلَا حَيَاةً وَلَا نُشُورًا

ಜನರು ಅವನನ್ನು ಬಿಟ್ಟು, ಯಾವ ವಸ್ತುವನ್ನೂ ಸೃಷ್ಟಿಸದ ಮತ್ತು ಸ್ವತಃ ಸೃಷ್ಟಿಸಲ್ಪಟ್ಟಂತಹ ವಸ್ತುಗಳನ್ನು ಆರಾಧ್ಯರನ್ನಾಗಿ ಮಾಡಿಕೊಂಡರು. ಅವು ಸ್ವತಃ ತಮಗೂ ಯಾವುದೇ ಲಾಭ ಅಥವಾ ಹಾನಿಯನ್ನುಂಟು ಮಾಡುವ ಅಧಿಕಾರ ಹೊಂದಿಲ್ಲ. ಅವು ಕೊಲ್ಲಲಾರವು, ಜೀವಂತಗೊಳಿಸಲಾರವು ಮತ್ತು ಸತ್ತವನನ್ನು ಪುನಃ ಎಬ್ಬಿಸಲಾರವು.


4وَقَالَ الَّذِينَ كَفَرُوا إِنْ هَٰذَا إِلَّا إِفْكٌ افْتَرَاهُ وَأَعَانَهُ عَلَيْهِ قَوْمٌ آخَرُونَ ۖ فَقَدْ جَاءُوا ظُلْمًا وَزُورًا

(ಪ್ರವಾದಿಯ ಮಾತನ್ನು ನಿರಾಕರಿಸಿದ) ಸತ್ಯನಿಷೇಧಿಗಳು \"ಈ ಫುರ್ಕಾನ್ ಒಂದು ಕಪೋಲ ಕಲ್ಪಿತ ವಸ್ತು. ಇದನ್ನು ಈ ವ್ಯಕ್ತಿಯು ತಾನೇ ಸೃಷ್ಟಿಸಿಕೊಂಡಿದ್ದು ಬೇರೆ ಕೆಲವರು ಈ ಕಾರ್ಯದಲ್ಲಿ ಇವನಿಗೆ ಸಹಾಯ ಮಾಡಿದ್ದಾರೆ\" ಎನ್ನುತ್ತಾರೆ. ಇವರು ದೊಡ್ಡ ಅಕ್ರಮ ಹಾಗೂ ಹಸಿ ಸುಳ್ಳಿಗೆ ಇಳಿದಿದ್ದಾರೆ.


5وَقَالُوا أَسَاطِيرُ الْأَوَّلِينَ اكْتَتَبَهَا فَهِيَ تُمْلَىٰ عَلَيْهِ بُكْرَةً وَأَصِيلًا

\"ಇದೆಲ್ಲಾ ಹಳೇ ಕಾಲದವರು ಬರೆದಿಟ್ಟ ವಿಷಯಗಳಾಗಿವೆ. ಅದನ್ನೇ ಇವನು ಬರೆಯಿಸಿ ಕೊಳ್ಳುತ್ತಾನೆ ಮತ್ತು ಅದನ್ನು ಬೆಳಗು ಬೈಗುಗಳಲ್ಲಿ ಅವನಿಗೆ ಓದಿ ಹೇಳಲಾಗುತ್ತದೆ\" ಎಂದೂ ಅವರು ಹೇಳುತ್ತಾರೆ.


6قُلْ أَنْزَلَهُ الَّذِي يَعْلَمُ السِّرَّ فِي السَّمَاوَاتِ وَالْأَرْضِ ۚ إِنَّهُ كَانَ غَفُورًا رَحِيمًا

ಪೈಗಂಬರರೇ, \"ಭೂಮಿ-ಆಕಾಶಗಳ ರಹಸ್ಯವನ್ನು ಅರಿತಿರುವಾತನು ಇದನ್ನು ಅವತೀರ್ಣ ಗೊಳಿಸಿರುತ್ತಾನೆ\" ಎಂದು ಇವರೊಡನೆ ಹೇಳಿರಿ. ವಾಸ್ತವದಲ್ಲಿ ಅವನು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.


7وَقَالُوا مَالِ هَٰذَا الرَّسُولِ يَأْكُلُ الطَّعَامَ وَيَمْشِي فِي الْأَسْوَاقِ ۙ لَوْلَا أُنْزِلَ إِلَيْهِ مَلَكٌ فَيَكُونَ مَعَهُ نَذِيرًا

(ಇವರು) \"ಆಹಾರ ಸೇವಿಸುವ ಮತ್ತು ಪೇಟೆಗಳಲ್ಲಿ ಸಂಚರಿಸುವ ಈ ವ್ಯಕ್ತಿ ಅದೆಂತಹ ಪ್ರವಾದಿ? ಇವನ ಜೊತೆಗಿದ್ದು, (ನಿರಾಕರಿಸುವವರನ್ನು) ಗದರಿಸಲಿಕ್ಕಾಗಿ ಇವನ ಬಳಿಗೆ ಒಬ್ಬ ದೇವಚರನನ್ನೇಕೆ ಕಳುಹಿಸಲಾಗಿಲ್ಲ?


8أَوْ يُلْقَىٰ إِلَيْهِ كَنْزٌ أَوْ تَكُونُ لَهُ جَنَّةٌ يَأْكُلُ مِنْهَا ۚ وَقَالَ الظَّالِمُونَ إِنْ تَتَّبِعُونَ إِلَّا رَجُلًا مَسْحُورًا

ಅಥವಾ ಕನಿಷ್ಠ ಪಕ್ಷ ಇವನಿಗಾಗಿ ಒಂದು ನಿಧಿಯನ್ನಾದರೂ ಇಳಿಸಬಹುದಿತ್ತು ಅಥವಾ ಇವನ ಬಳಿಯಲ್ಲಿ ಒಂದು ತೋಟ ವಾದರೂ ಇದ್ದು ಅದರಿಂದ ಇವನು (ನಿಶ್ಚಿಂತನಾಗಿ) ಉಣ್ಣ ಬಹುದಿತ್ತು ಎನ್ನುತ್ತಾರೆ ಮತ್ತು ಈ ಅಕ್ರಮಿಗಳು, \"ನೀವಂತೂ ಒಬ್ಬ ಮಾಟ ಪೀಡಿತನನ್ನು ಹಿಂಬಾಲಿಸುತ್ತಿರುವಿರಿ\" ಎನ್ನುತ್ತಾರೆ.


9انْظُرْ كَيْفَ ضَرَبُوا لَكَ الْأَمْثَالَ فَضَلُّوا فَلَا يَسْتَطِيعُونَ سَبِيلًا

ನೋಡಿರಿ, ಇವರು ಎಂತೆಂತಹ ವಾದಗಳನ್ನು ನಿಮ್ಮ ಮುಂದಿಡುತ್ತಿದ್ದಾರೆ. ಇವರು ಎಷ್ಟರ ಮಟ್ಟಿಗೆ ದಾರಿ ತಪ್ಪಿದ್ದಾರೆಂದರೆ ಸರಿಯಾದ ಮಾತೇ ಇವರಿಗೆ ತೋಚುವುದಿಲ್ಲ.


10تَبَارَكَ الَّذِي إِنْ شَاءَ جَعَلَ لَكَ خَيْرًا مِنْ ذَٰلِكَ جَنَّاتٍ تَجْرِي مِنْ تَحْتِهَا الْأَنْهَارُ وَيَجْعَلْ لَكَ قُصُورًا

ಅವನು ಮಹಾ ಸುಮಂಗಲನು. ಅವನಿಚ್ಛಿಸಿದರೆ, ಇವರು ಹೇಳು ವಂತಹ ವಸ್ತುಗಳಿಗಿಂತಲೂ ಶ್ರೇಷ್ಠವಾದವುಗಳನ್ನು ನಿಮಗೆ ದಯಪಾಲಿಸಬಲ್ಲನು. ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿ ರುವ (ಒಂದಲ್ಲ) ಅನೇಕ ಉದ್ಯಾನಗಳನ್ನೂ ದೊಡ್ಡ ದೊಡ್ಡ ಅರಮನೆಗಳನ್ನೂ ದಯಪಾಲಿಸಬಲ್ಲನು.