1 يَا أَيُّهَا النَّاسُ اتَّقُوا رَبَّكُمْ ۚ إِنَّ زَلْزَلَةَ السَّاعَةِ شَيْءٌ عَظِيمٌ

ಜನರೇ ನಿಮ್ಮ ಪ್ರಭುವಿನ ಕ್ರೋಧವನ್ನು ಭಯಪಡಿರಿ. ವಾಸ್ತವದಲ್ಲಿ ಪುನರುತ್ಥಾನದ ಫಳಿಗೆಯ ಮಹಾಕಂಪನವು (ಭಯಾನಕ) ವಿಷಯವಾಗಿದೆ.


2يَوْمَ تَرَوْنَهَا تَذْهَلُ كُلُّ مُرْضِعَةٍ عَمَّا أَرْضَعَتْ وَتَضَعُ كُلُّ ذَاتِ حَمْلٍ حَمْلَهَا وَتَرَى النَّاسَ سُكَارَىٰ وَمَا هُمْ بِسُكَارَىٰ وَلَٰكِنَّ عَذَابَ اللَّهِ شَدِيدٌ

ನೀವು ಅದನ್ನು ಕಾಣುವಂದು ಹಾಲುಣಿಸುವವಳು ಹಾಲುಣ್ಣುವ ತನ್ನ ಶಿಶುವನ್ನು ಮರೆತು ಬಿಡುವಳು. ಪ್ರತಿಯೊಬ್ಬ ಗರ್ಭಿಣಿಗೆ ಗರ್ಭಪಾತವಾಗಿ ಬಿಡುವುದು. ಜನರು ನಿಮಗೆ ಉನ್ಮತ್ತರಂತೆ ತೋರುವರು. ವಸ್ತುತಃ ಅವರು ಉನ್ಮತ್ತರಾಗಿರಲಾರರು. ನಿಜವಾಗಿ ಅಲ್ಲಾಹನ ಯಾತನೆಯೇ ಅಷ್ಟು ಭೀಕರವಾಗಿರುವುದು.


3وَمِنَ النَّاسِ مَنْ يُجَادِلُ فِي اللَّهِ بِغَيْرِ عِلْمٍ وَيَتَّبِعُ كُلَّ شَيْطَانٍ مَرِيدٍ

ಜನರಲ್ಲಿ ಕೆಲವರು ತಿಳುವಳಿಕೆ ಇಲ್ಲದೆಯೇ ಅಲ್ಲಾಹನ ಬಗ್ಗೆ ವಾದ - ವಿವಾದ ನಡೆಸುತ್ತಾರೆ ಮತ್ತು ಪ್ರತಿಯೋರ್ವ ಉದ್ಧಟ ಶೈತಾನನನ್ನು ಅನುಸರಿಸುತ್ತಾರೆ.


4كُتِبَ عَلَيْهِ أَنَّهُ مَنْ تَوَلَّاهُ فَأَنَّهُ يُضِلُّهُ وَيَهْدِيهِ إِلَىٰ عَذَابِ السَّعِيرِ

ವಸ್ತುತಃ ಅವನನ್ನು ತನ್ನ ಮಿತ್ರನಾಗಿ ಮಾಡಿಕೊಳ್ಳುವವನನ್ನು ಆತನು ಪಥಭ್ರಷ್ಟಗೊಳಿಸಿಯೇ ತೀರುವನು ಮತ್ತು ನರಕದ ಯಾತನೆಯ ದಾರಿ ತೋರಿಸುವನು ಎಂದು ಅವನ ಅದೃಷ್ಟದಲ್ಲೇ ಬರೆದಿದೆ.


5يَا أَيُّهَا النَّاسُ إِنْ كُنْتُمْ فِي رَيْبٍ مِنَ الْبَعْثِ فَإِنَّا خَلَقْنَاكُمْ مِنْ تُرَابٍ ثُمَّ مِنْ نُطْفَةٍ ثُمَّ مِنْ عَلَقَةٍ ثُمَّ مِنْ مُضْغَةٍ مُخَلَّقَةٍ وَغَيْرِ مُخَلَّقَةٍ لِنُبَيِّنَ لَكُمْ ۚ وَنُقِرُّ فِي الْأَرْحَامِ مَا نَشَاءُ

ಜನರೇ, ನಿಮಗೆ ಮರಣಾ ನಂತರದ ಜೀವನದ ಬಗೆಗೇನಾದರೂ ಸಂಶಯವಿದ್ದರೆ, ನಾವು ನಿಮ್ಮನ್ನು ಮಣ್ಣಿನಿಂದಲೂ ಅನಂತರ ವೀರ್ಯದಿಂದಲೂ ಆಮೇಲೆ ರಕ್ತ ಪಿಂಡದಿಂದಲೂ ಆ ಬಳಿಕ ರೂಪವಿರುವ ಮತ್ತು ರೂಪವಿಲ್ಲದ ಮಾಂಸದ ತುಣುಕಿನಿಂದಲೂ ಸೃಷ್ಟಿಸಿದೆವು ಎಂಬುದು ನಿಮಗೆ ತಿಳಿದಿರಲಿ. ನಿಮಗೆ ವಸ್ತುಸ್ಥಿತಿ ವಿವರಿಸಲಿಕ್ಕಾಗಿ (ನಾವು ಇದನ್ನು ತಿಳಿಸುತ್ತಿದ್ದೇವೆ). ನಾವು ನಮಗಿಷ್ಟವಿರುವುದನ್ನು (ವೀರ್ಯವನ್ನು) ಒಂದು ನಿರ್ದಿಷ್ಟ ಅವಧಿಯ ತನಕ ಗರ್ಭಾಶಯದೊಳಗೆ ತಡೆದಿರಿಸುತ್ತೇವೆ. ಅನಂತರ ನಿಮ್ಮನ್ನು ಒಂದು ಶಿಶುವಿನ ರೂಪದಲ್ಲಿ ಹೊರ ತರುತ್ತೇವೆ. (ತರುವಾಯ) ನೀವು ತಾರುಣ್ಯಕ್ಕೆ ತಲುಪುವಂತಾಗಲು (ನಿಮ್ಮನ್ನು ಪೋಷಿಸುತ್ತೇವೆ) ಮತ್ತು ನಿಮ್ಮಲ್ಲಿ ಕೆಲವರನ್ನು ಮೊದಲೇ ಹಿಂದಕ್ಕೆ ಕರೆಸಿ ಕೊಳ್ಳಲಾಗುತ್ತದೆ ಮತ್ತು ಕೆಲವರನ್ನು ಎಲ್ಲವನ್ನೂ ತಿಳಿದುಕೊಂಡ ಬಳಿಕ ಏನೂ ತಿಳಿಯದಂತಾಗಲು ಅತಿ ವೃದ್ಧಾಪ್ಯದೆಡೆಗೆ ತಿರುಗಿಸಿ ಬಿಡಲಾಗುತ್ತದೆ. ನೆಲವು ಒಣಗಿರುವುದನ್ನು ನೀವು ನೋಡುತ್ತೀರಿ. ಅನಂತರ ನಾವು ಅದರ ಮೇಲೆ ಮಳೆಗೆರೆದಾಗ ಅದು ಒಮ್ಮೆಲೇ ಮೊಳೆಯಿತು, ಉಬ್ಬಿತು ಮತ್ತು ಎಲ್ಲ ಬಗೆಯ ನಯನ ಮನೋಹರ ಸಸ್ಯಗಳನ್ನು ಹೊರಗೆಡಹ ತೊಡಗಿಬಿಟ್ಟಿತು.


6ذَٰلِكَ بِأَنَّ اللَّهَ هُوَ الْحَقُّ وَأَنَّهُ يُحْيِي الْمَوْتَىٰ وَأَنَّهُ عَلَىٰ كُلِّ شَيْءٍ قَدِيرٌ

ಇವೆಲ್ಲ ಆಗುವುದಕ್ಕೆ ಕಾರಣ ಅಲ್ಲಾಹನೇ ಪರಮ ಸತ್ಯವಾಗಿರು ವುದು. ಅವನು ಮೃತರನ್ನು ಜೀವಂತಗೊಳಿಸುತ್ತಾನೆ ಮತ್ತು ಸರ್ವ ವಿಷಯಗಳ ಮೇಲೆ ಸಾಮಥ್ರ್ಯವುಳ್ಳವನಾಗಿರುತ್ತಾನೆ.


7وَأَنَّ السَّاعَةَ آتِيَةٌ لَا رَيْبَ فِيهَا وَأَنَّ اللَّهَ يَبْعَثُ مَنْ فِي الْقُبُورِ

ಪುನರುತ್ಥಾನದ ಫಳಿಗೆಯು ಬಂದೇ ತೀರುವುದು (ಎಂಬುದಕ್ಕಿದು ಆಧಾರವಾಗಿದೆ) ಇದರಲ್ಲಿ ಸಂಶಯಕ್ಕೆ ಅವಕಾಶವೇ ಇಲ್ಲ ಮತ್ತು ಸಮಾಧಿಗಳೊಳಗೆ ಹೋಗಿರುವವರನ್ನು ಅಲ್ಲಾಹನು ಖಂಡಿತವಾಗಿಯೂ ಎಬ್ಬಿಸುವನು.


8وَمِنَ النَّاسِ مَنْ يُجَادِلُ فِي اللَّهِ بِغَيْرِ عِلْمٍ وَلَا هُدًى وَلَا كِتَابٍ مُنِيرٍ

ಮತ್ತೆ ಕೆಲವರು ಯಾವುದೇ ಜ್ಞಾನ, ಸನ್ಮಾರ್ಗದರ್ಶನ ಮತ್ತು ಪ್ರಕಾಶ ನೀಡುವಂತಹ ಗ್ರಂಥದಹೊರತಾಗಿಯೇ ಅಲ್ಲಾಹನ ವಿಷಯದಲ್ಲಿ ಜಗಳಾಡುವವರಿದ್ದಾರೆ.


9ثَانِيَ عِطْفِهِ لِيُضِلَّ عَنْ سَبِيلِ اللَّهِ ۖ لَهُ فِي الدُّنْيَا خِزْيٌ ۖ وَنُذِيقُهُ يَوْمَ الْقِيَامَةِ عَذَابَ الْحَرِيقِ

ಕೊರಳನ್ನು ಸೆಟೆಯುತ್ತ ಜನರನ್ನು ದೇವ ಮಾರ್ಗದಿಂದ ತಪ್ಪಿಸಲಿಕ್ಕಾಗಿ(ಅವರು ಹೀಗೆ ಮಾಡುತ್ತಾರೆ). ಇಂತಹವನಿಗೆ ಈ ಲೋಕ ದಲ್ಲಿ ಅಪಮಾನವಿದೆ. ಪುನರುತ್ಥಾನದ ದಿನ ನಾವು ಅವನಿಗೆ ನರಕಾಗ್ನಿಯ ಶಿಕ್ಷೆಯ ಸವಿಯನ್ನು ಉಣಿಸುವೆವು.


10ذَٰلِكَ بِمَا قَدَّمَتْ يَدَاكَ وَأَنَّ اللَّهَ لَيْسَ بِظَلَّامٍ لِلْعَبِيدِ

ನಿನ್ನ ಸ್ವಂತ ಕೈಗಳು ನಿನಗಾಗಿ ಸಿದ್ಧಗೊಳಿಸಿರುವ ನಿನ್ನ ಭವಿಷ್ಯವಿದು. ಅನ್ಯಥಾ ಅಲ್ಲಾಹನು ತನ್ನ ದಾಸರ ಮೇಲೆ ಅಕ್ರಮವೆಸಗುವವನಲ್ಲ.