1 الر ۚ كِتَابٌ أَنْزَلْنَاهُ إِلَيْكَ لِتُخْرِجَ النَّاسَ مِنَ الظُّلُمَاتِ إِلَى النُّورِ بِإِذْنِ رَبِّهِمْ إِلَىٰ صِرَاطِ الْعَزِيزِ الْحَمِيدِ

ಅಲಿಫ್ ಲಾಮ್ ರಾ. ಓ ಮುಹಮ್ಮದರೇ, ಇದೊಂದು ಗ್ರಂಥ. ನೀವು ಜನರನ್ನು ಅವರ ಪ್ರಭುವಿನ ಅನುಜ್ಞೆಯಂತೆ ಅಂಧಕಾರಗಳಿಂದ ಹೊರತೆಗೆದು ಪ್ರಕಾಶದ ಕಡೆಗೆ ತರಲಿಕ್ಕಾಗಿ ನಾವು ಇದನ್ನು ನಿಮಗೆ ಅವತೀರ್ಣಗೊಳಿಸಿರುತ್ತೇವೆ. ಅವನು ಮಹಾ ಪ್ರತಾಪಿಯೂ ಸ್ವಯಂ ಸ್ತುತ್ಯರ್ಹನೂ ಆಗಿರುತ್ತಾನೆ.


2اللَّهِ الَّذِي لَهُ مَا فِي السَّمَاوَاتِ وَمَا فِي الْأَرْضِ ۗ وَوَيْلٌ لِلْكَافِرِينَ مِنْ عَذَابٍ شَدِيدٍ

ಮತ್ತು ಆಕಾಶಗಳ ಹಾಗೂ ಭೂಮಿಯ ಸಕಲ ಸೃಷ್ಟಿಗಳ ಮಾಲಕನಾಗಿರುತ್ತಾನೆ. ಸತ್ಯನಿಷೇಧಿಗಳಿಗೆ ಅತ್ಯಂತ ವಿನಾಶಕಾರಿ ಶಿಕ್ಷೆಯಿದೆ.


3الَّذِينَ يَسْتَحِبُّونَ الْحَيَاةَ الدُّنْيَا عَلَى الْآخِرَةِ وَيَصُدُّونَ عَنْ سَبِيلِ اللَّهِ وَيَبْغُونَهَا عِوَجًا ۚ أُولَٰئِكَ فِي ضَلَالٍ بَعِيدٍ

ಅವರು ಐಹಿಕ ಜೀವನಕ್ಕೆ ಪಾರತ್ರಿಕ ಜೀವನಕ್ಕಿಂತ ಹೆಚ್ಚು ಮಹತ್ವ ನೀಡುತ್ತಾರೆ. ಅವರು ಜನರನ್ನು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ ಮತ್ತು ಈ ಮಾರ್ಗವು (ಅವರ ಇಚ್ಛೆಗಳ ಪ್ರಕಾರ) ವಕ್ರವಾಗಬೇಕೆಂದು ಬಯಸುತ್ತಾರೆ. ಇವರು ಪಥ ಭ್ರಷ್ಟತೆಯಲ್ಲಿ ಬಹುದೂರ ಸಾಗಿದ್ದಾರೆ.


4وَمَا أَرْسَلْنَا مِنْ رَسُولٍ إِلَّا بِلِسَانِ قَوْمِهِ لِيُبَيِّنَ لَهُمْ ۖ فَيُضِلُّ اللَّهُ مَنْ يَشَاءُ وَيَهْدِي مَنْ يَشَاءُ ۚ وَهُوَ الْعَزِيزُ الْحَكِيمُ

ನಾವು ನಮ್ಮ ಸಂದೇಶವನ್ನು ಸಾರಲಿಕ್ಕಾಗಿ ರವಾನಿಸಿದ ಪ್ರವಾದಿಗಳ ಪೈಕಿ ಪ್ರತಿಯೊಬ್ಬನೂ ತನ್ನ ಜನಾಂಗದವರಿಗೆ ಚೆನ್ನಾಗಿ ವಿವರಿಸಿ ಕೊಡಲಿಕ್ಕಾಗಿ ಅವರ ಭಾಷೆಯಲ್ಲೇ ಸಂದೇಶ ಕೊಟ್ಟಿರುತ್ತಾನೆ. ಮುಂದೆ ಅಲ್ಲಾಹನು ತನಗಿಷ್ಟ ಬಂದವರನ್ನು ಪಥಭ್ರಷ್ಟಗೊಳಿಸುತ್ತಾನೆ ಮತ್ತು ತನಗಿಷ್ಟ ಬಂದವರಿಗೆ ಸನ್ಮಾರ್ಗದರ್ಶನ ನೀಡುತ್ತಾನೆ. ಅವನು ಮಹಾ ಪ್ರತಾಪಶಾಲಿಯೂ ಧೀಮಂತನೂ ಆಗಿರುತ್ತಾನೆ.


5وَلَقَدْ أَرْسَلْنَا مُوسَىٰ بِآيَاتِنَا أَنْ أَخْرِجْ قَوْمَكَ مِنَ الظُّلُمَاتِ إِلَى النُّورِ وَذَكِّرْهُمْ بِأَيَّامِ اللَّهِ ۚ إِنَّ فِي ذَٰلِكَ لَآيَاتٍ لِكُلِّ صَبَّارٍ شَكُورٍ

ನಾವು ಇದಕ್ಕಿಂತ ಮುಂಚೆ ಮೂಸಾರನ್ನು ನಮ್ಮ ನಿದರ್ಶನಗಳೊಂದಿಗೆ ರವಾನಿಸಿದ್ದೆವು. ನಿಮ್ಮ ಜನಾಂಗವನ್ನು ಅಂಧಕಾರಗಳಿಂದ ಹೊರತೆಗೆದು ಪ್ರಕಾಶಕ್ಕೆ ತರಬೇಕೆಂದೂ ಅವರಿಗೆ 'ಅಯ್ಯಾಮಿಲ್ಲಾಹ್' (ದಿವ್ಯದಿನ)ಗಳ ಬೋಧಪ್ರದ ಫಟನೆಗಳನ್ನು ಹೇಳಿ ತಿಳಿಸಿ ಉಪದೇಶಿಸ ಬೇಕೆಂದೂ ನಾವು ಅವರಿಗೂ ಅಪ್ಪಣೆ ಕೊಟ್ಟಿದ್ದೆವು. ಈ ಫಟನೆಗಳಲ್ಲಿ ನಿಶ್ಚಯವಾಗಿಯೂ ಪ್ರತಿಯೊಬ್ಬ ಸಹನಶೀಲನಿಗೂ ಕೃತಜ್ಞನಿಗೂ ದೊಡ್ಡ ನಿದರ್ಶನಗಳಿವೆ.


6وَإِذْ قَالَ مُوسَىٰ لِقَوْمِهِ اذْكُرُوا نِعْمَةَ اللَّهِ عَلَيْكُمْ إِذْ أَنْجَاكُمْ مِنْ آلِ فِرْعَوْنَ يَسُومُونَكُمْ سُوءَ الْعَذَابِ وَيُذَبِّحُونَ أَبْنَاءَكُمْ وَيَسْتَحْيُونَ نِسَاءَكُمْ ۚ وَفِي ذَٰلِكُمْ بَلَاءٌ مِنْ رَبِّكُمْ عَظِيمٌ

ಮೂಸಾ ತನ್ನ ಜನಾಂಗದೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ, "ಅಲ್ಲಾಹನು ನಿಮ್ಮ ಮೇಲೆ ಮಾಡಿದ ಉಪಕಾರವನ್ನು ಸ್ಮರಿಸಿರಿ. ಅವನು ನಿಮ್ಮನ್ನು ಫಿರ್ಔನನ ಜನಾಂಗದಿಂದ ಬಿಡಿಸಿದನು. ಅವರು ನಿಮಗೆ ಅತ್ಯಧಿಕ ಹಿಂಸೆ ಕೊಡುತ್ತಿದ್ದರು. ನಿಮ್ಮ ಗಂಡು ಮಕ್ಕಳನ್ನು ವಧಿಸಿ ಬಿಡುತ್ತಿದ್ದರು ಮತ್ತು ನಿಮ್ಮ ಹೆಣ್ಣು ಮಕ್ಕಳನ್ನು ಜೀವಂತ ಬಿಟ್ಟು ಬಿಡುತ್ತಿದ್ದರು. ಇದರಲ್ಲಿ ನಿಮ್ಮ ಪ್ರಭುವಿನ ಕಡೆಯಿಂದ ನಿಮ್ಮ ಪಾಲಿಗೆ ಮಹಾ ಪರೀಕ್ಷೆಯಿತ್ತು.


7وَإِذْ تَأَذَّنَ رَبُّكُمْ لَئِنْ شَكَرْتُمْ لَأَزِيدَنَّكُمْ ۖ وَلَئِنْ كَفَرْتُمْ إِنَّ عَذَابِي لَشَدِيدٌ

ನೀವು ಕೃತಜ್ಞರಾಗಿದ್ದರೆ ನಾನು ನಿಮಗೆ ಇನ್ನೂ ಹೆಚ್ಚು ಪ್ರದಾನ ಮಾಡುವೆನೆಂದೂ ನೀವು ಕೃತಘ್ನತೆ ತೋರಿದರೆ ನನ್ನ ಶಿಕ್ಷೆಯು ಅತ್ಯಂತ ಕಠಿಣವಾಗಿದೆಯೆಂದೂ ನಿಮ್ಮ ಪ್ರಭು ಎಚ್ಚರಿಕೆ ಕೊಟ್ಟಿದ್ದುದನ್ನೂ ಸ್ಮರಿಸಿರಿ."


8وَقَالَ مُوسَىٰ إِنْ تَكْفُرُوا أَنْتُمْ وَمَنْ فِي الْأَرْضِ جَمِيعًا فَإِنَّ اللَّهَ لَغَنِيٌّ حَمِيدٌ

ಮತ್ತು ಮೂಸಾ ಹೇಳಿದರು: "ನೀವೂ ಭೂಮಿಯ ಮೇಲೆ ವಾಸಿಸುವವರೆಲ್ಲರೂ ಸತ್ಯನಿಷೇಧಿಗಳಾಗಿ ಬಿಟ್ಟರೂ ಅಲ್ಲಾಹನು ನಿರಪೇಕ್ಷನೂ ಸ್ವಯಂ ಸ್ತುತ್ಯರ್ಹನೂ ಆಗಿರುತ್ತಾನೆ."


9أَلَمْ يَأْتِكُمْ نَبَأُ الَّذِينَ مِنْ قَبْلِكُمْ قَوْمِ نُوحٍ وَعَادٍ وَثَمُودَ ۛ وَالَّذِينَ مِنْ بَعْدِهِمْ ۛ لَا يَعْلَمُهُمْ إِلَّا اللَّهُ ۚ جَاءَتْهُمْ رُسُلُهُمْ بِالْبَيِّنَاتِ فَرَدُّوا أَيْدِيَهُمْ فِي أَفْوَاهِهِمْ وَقَالُوا إِنَّا كَفَر

ನಿಮಗಿಂತ ಮುಂಚೆ ಗತಿಸಿ ಹೋದ ನೂಹರ ಜನಾಂಗ, ಆದ್, ಸಮೂದ್ ಮತ್ತು ಅಲ್ಲಾಹನ ಹೊರತು ಇನ್ನಾರ ಲೆಕ್ಕಕ್ಕೂ ಸಿಗದ ಅವರ ನಂತರದ ಹಲವಾರು ಜನಾಂಗಗಳ ಸಮಾಚಾರಗಳು ನಿಮಗೆ ತಲುಪಲಿಲ್ಲವೇ? ಅವರ ಸಂದೇಶವಾಹಕರು ಅವರ ಬಳಿಗೆ ಸುಸ್ಪಷ್ಟ ವಿಷಯಗಳನ್ನೂ ಸುವ್ಯಕ್ತ ನಿದರ್ಶನಗಳನ್ನೂ ತಂದಾಗ ಅವರು ತಮ್ಮ ಕೈಯನ್ನು ಬಾಯೊಳಗೆ ಒತ್ತಿಕೊಂಡು (ಹೀಗೆ) ಹೇಳಿದರು- "ಯಾವ ಸಂದೇಶ ಸಹಿತ ನೀವು ಕಳುಹಿಸಲ್ಪಟ್ಟಿರುವಿರೋ ಅದನ್ನು ನಾವು ನಿರಾಕರಿಸುತ್ತೇವೆ ಮತ್ತು ನೀವು ನಮಗೆ ಯಾವುದರ ಕರೆ ನೀಡುತ್ತೀರೋ ಅದರ ಬಗ್ಗೆ ನಾವು ತೀವ್ರ ಚಿಂತಾಪೂರ್ಣ ಸಂಶಯಕ್ಕೊಳಗಾಗಿದ್ದೇವೆ."


10قَالَتْ رُسُلُهُمْ أَفِي اللَّهِ شَكٌّ فَاطِرِ السَّمَاوَاتِ وَالْأَرْضِ ۖ يَدْعُوكُمْ لِيَغْفِرَ لَكُمْ مِنْ ذُنُوبِكُمْ وَيُؤَخِّرَكُمْ إِلَىٰ أَجَلٍ مُسَمًّى ۚ قَالُوا إِنْ أَنْتُمْ إِلَّا بَشَرٌ مِثْلُنَا تُرِيدُونَ أَنْ تَصُدُّونَا عَمَّا كَانَ

ಅವರ ರಸೂಲರು ಹೇಳಿದರು- "ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನಾದ ಅಲ್ಲಾಹನ ಬಗ್ಗೆ ನಿಮಗೆ ಸಂಶಯವಿದೆಯೇ? ಅವನು ನಿಮ್ಮ ಅಪರಾಧಗಳನ್ನು ಕ್ಷಮಿಸಲಿಕ್ಕಾಗಿ ಮತ್ತು ನಿಮಗೆ ಒಂದು ನಿಶ್ಚಿತ ಅವಧಿಯ ತನಕ ಸಮಯಾವಕಾಶ ನೀಡಲಿಕ್ಕಾಗಿ ನಿಮ್ಮನ್ನು ಕರೆಯುತ್ತಿದ್ದಾನೆ." ಅವರು (ಹೀಗೆ) ಉತ್ತರಕೊಟ್ಟರು, "ನೀವು ನಮ್ಮ ಹಾಗಿರುವ ಮನುಷ್ಯರಲ್ಲದೆ ಇನ್ನೇನೂ ಅಲ್ಲ. ನಮ್ಮ ಪೂರ್ವಿಕರಿಂದಲೇ ಆರಾಧಿಸಲ್ಪಡುತ್ತಾ ಬಂದಿರುವವುಗಳ ದಾಸ್ಯ-ಆರಾಧನೆಯಿಂದ ನೀವು ನಮ್ಮನ್ನು ತಡೆಯಲಿಚ್ಛಿಸುತ್ತೀರಿ. ಹಾಗಿದ್ದರೆ ಸುವ್ಯಕ್ತ ಆಧಾರ ಪ್ರಮಾಣ ತನ್ನಿರಿ."