1 الر ۚ كِتَابٌ أُحْكِمَتْ آيَاتُهُ ثُمَّ فُصِّلَتْ مِنْ لَدُنْ حَكِيمٍ خَبِيرٍ

ಅಲಿಫ್ ಲಾಮ್ ರಾ, ಇದು ಫರಮಾನು ಇದರ ಸೂಕ್ತಗಳು ಪ್ರಬುದ್ಧ ಮತ್ತು ಕೂಲಂಕಷವಾಗಿದ್ದು ಓರ್ವ ಧೀಮಂತನೂ ವಿವರಪೂರ್ಣನೂ ಆದವನ ಕಡೆಯಿಂದ ನಿರ್ದೇಶಿಸಲ್ಪಟ್ಟಿದೆ.


2أَلَّا تَعْبُدُوا إِلَّا اللَّهَ ۚ إِنَّنِي لَكُمْ مِنْهُ نَذِيرٌ وَبَشِيرٌ

ನೀವು ಅಲ್ಲಾಹನ ಹೊರತು ಇನ್ನಾರ ದಾಸ್ಯ-ಆರಾಧನೆಯನ್ನೂ ಮಾಡಬಾರದೆಂದು ನಾನು ಅವನ ಕಡೆಯಿಂದ ನಿಮಗೆ ಎಚ್ಚರಿಕೆ ಕೊಡುವವನೂ ಸುವಾರ್ತೆ ನೀಡುವವನೂ ಆಗಿರುತ್ತೇನೆ.


3وَأَنِ اسْتَغْفِرُوا رَبَّكُمْ ثُمَّ تُوبُوا إِلَيْهِ يُمَتِّعْكُمْ مَتَاعًا حَسَنًا إِلَىٰ أَجَلٍ مُسَمًّى وَيُؤْتِ كُلَّ ذِي فَضْلٍ فَضْلَهُ ۖ وَإِنْ تَوَلَّوْا فَإِنِّي أَخَافُ عَلَيْكُمْ عَذَابَ يَوْمٍ كَبِيرٍ

ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆಯಾಚಿಸಿ ಅವನಿಗೆ ಶರಣು ಹೋಗಿರಿ. ಅವನು ಒಂದು ನಿಶ್ಚಿತ ಕಾಲಾವಧಿಯ ವರೆಗೆ ನಿಮಗೆ ಉತ್ತಮ ಜೀವನಾಧಾರಗಳನ್ನು ನೀಡುವನು ಮತ್ತು ಪ್ರತಿಯೊಬ್ಬ ಅನುಗ್ರಹೀತನಿಗೆ ತನ್ನ ಅನುಗ್ರಹವನ್ನು ದಯಪಾಲಿಸುವನು. ಆದರೆ ನೀವು ವಿಮುಖರಾದರೆ ನಿಮ್ಮ ಪಾಲಿಗೆ ಒಂದು ಮಹಾ ದಿನದಂದು ಬರುವ ಯಾತನೆಯ ಬಗ್ಗೆ ನಾನು ಭಯಪಡುತ್ತೇನೆ.


4إِلَى اللَّهِ مَرْجِعُكُمْ ۖ وَهُوَ عَلَىٰ كُلِّ شَيْءٍ قَدِيرٌ

ನಿಮಗೆಲ್ಲರಿಗೂ ಅಲ್ಲಾಹನ ಕಡೆಗೆ ಮರಳಲಿಕ್ಕಿದೆ. ಅವನು ಸರ್ವಸಮರ್ಥನು.


5أَلَا إِنَّهُمْ يَثْنُونَ صُدُورَهُمْ لِيَسْتَخْفُوا مِنْهُ ۚ أَلَا حِينَ يَسْتَغْشُونَ ثِيَابَهُمْ يَعْلَمُ مَا يُسِرُّونَ وَمَا يُعْلِنُونَ ۚ إِنَّهُ عَلِيمٌ بِذَاتِ الصُّدُورِ

ನೋಡಿರಿ, ಇವರು ಅವನಿಂದ ಅಡಗಿಸಿಕೊಳ್ಳಲಿಕ್ಕಾಗಿ ತಮ್ಮ ಹೃದಯಗಳನ್ನು ಮುದುಡಿಕೊಳ್ಳುತ್ತಾರೆ. ಜಾಗ್ರತೆ! ಇವರು ತಮ್ಮನ್ನು ತಾವು ಬಟ್ಟೆಗಳಿಂದ ಮುಚ್ಚಿ ಕೊಂಡಾಗ ಅಲ್ಲಾಹ್ ಇವರ ಅಂತರಂಗವನ್ನೂ ಬಹಿರಂಗವನ್ನೂ ತಿಳಿಯುತ್ತಾನೆ. ಅವನಂತು ಇವರ ಹೃದಯ ರಹಸ್ಯಗಳನ್ನೂ ಬಲ್ಲನು.


6وَمَا مِنْ دَابَّةٍ فِي الْأَرْضِ إِلَّا عَلَى اللَّهِ رِزْقُهَا وَيَعْلَمُ مُسْتَقَرَّهَا وَمُسْتَوْدَعَهَا ۚ كُلٌّ فِي كِتَابٍ مُبِينٍ

ಭೂಮಿಯಲ್ಲಿ ಚಲಿಸುವ ಯಾವ ಸಜೀವಿಯ ಜೀವನಾಧಾರವೂ ಅಲ್ಲಾಹನ ಹೊಣೆಯಲ್ಲಿಲ್ಲದೆ ಇಲ್ಲ. ಅದು ಎಲ್ಲಿ ವಾಸಿಸುತ್ತದೆ ಮತ್ತು ಎಲ್ಲಿ ಒಪ್ಪಿಸಲ್ಪಡುತ್ತದೆ ಎಂಬುದು ಅವನಿಗೆ ತಿಳಿಯದೆ ಇಲ್ಲ. ಎಲ್ಲವೂ ಒಂದು ಸುಸ್ಪಷ್ಟ ಗ್ರಂಥದಲ್ಲಿ ಲಿಖಿತಗೊಂಡಿದೆ.


7وَهُوَ الَّذِي خَلَقَ السَّمَاوَاتِ وَالْأَرْضَ فِي سِتَّةِ أَيَّامٍ وَكَانَ عَرْشُهُ عَلَى الْمَاءِ لِيَبْلُوَكُمْ أَيُّكُمْ أَحْسَنُ عَمَلًا ۗ وَلَئِنْ قُلْتَ إِنَّكُمْ مَبْعُوثُونَ مِنْ بَعْدِ الْمَوْتِ لَيَقُولَنَّ الَّذِينَ كَفَرُوا إِنْ هَٰذَا

ನಿಮ್ಮಲ್ಲಿ ಸತ್ಕರ್ಮವೆಸಗುವವನಾರೆಂದು ನಿಮ್ಮನ್ನು ಪರೀಕ್ಷಿಸಲಿಕ್ಕಾಗಿ ಭೂಮಿ ಮತ್ತು ಆಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ಅವನೇ.- ಅದಕ್ಕಿಂತ ಮುಂಚೆ ಅವನ ವಿಶ್ವಸಿಂಹಾಸನ (ಅರ್ಶ್) ಅರ್ಥಾತ್ ಆಧಿಪತ್ಯವು ನೀರಿನ ಮೇಲಿತ್ತು. ಓ ಪೈಗಂಬರರೇ, ಮರಣಾನಂತರ ನೀವು ಇನ್ನೊಮ್ಮೆ ಎಬ್ಬಿಸಲ್ಪಡುವಿರೆಂದು ಅವರೊಡನೆ ಹೇಳಿದಾಗ ಸತ್ಯನಿಷೇಧಿಗಳು, "ಇದಂತು ಸುಸ್ಪಷ್ಟ ಮಾಟಗಾರಿಕೆ" ಎಂದು ಥಟ್ಟನೆ ಹೇಳಿಬಿಡುತ್ತಾರೆ.


8وَلَئِنْ أَخَّرْنَا عَنْهُمُ الْعَذَابَ إِلَىٰ أُمَّةٍ مَعْدُودَةٍ لَيَقُولُنَّ مَا يَحْبِسُهُ ۗ أَلَا يَوْمَ يَأْتِيهِمْ لَيْسَ مَصْرُوفًا عَنْهُمْ وَحَاقَ بِهِمْ مَا كَانُوا بِهِ يَسْتَهْزِئُونَ

ನಾವು ಅವರ ಶಿಕ್ಷೆಯನ್ನು ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ತಡೆದಿರಿಸಿದಾಗ, "ಅದನ್ನು ಯಾವ ವಸ್ತು ತಡೆಹಿಡಿಯಿತು?" ಎಂದು ಅವರು ಕೇಳುತ್ತಾರೆ. ಕೇಳಿರಿ! ಆ ಶಿಕ್ಷೆಯ ಸಮಯ ಬಂತೆಂದರೆ ಅದನ್ನು ಯಾರಿಂದಲೂ ತಡೆಯಲಾಗದು. ಅವರು ಯಾವುದನ್ನು ಅಪಹಾಸ್ಯ ಮಾಡುತ್ತಿದ್ದರೋ ಅದೇ ಅವರನ್ನು ಮುತ್ತಿಕೊಳ್ಳುವುದು.


9وَلَئِنْ أَذَقْنَا الْإِنْسَانَ مِنَّا رَحْمَةً ثُمَّ نَزَعْنَاهَا مِنْهُ إِنَّهُ لَيَئُوسٌ كَفُورٌ

ನಾವು ಮಾನವನಿಗೆ ನಮ್ಮ ಕೃಪೆಯನ್ನು ನೀಡಿ ಅನಂತರ ಅದನ್ನು ಅವನಿಂದ ಕಸಿದುಕೊಂಡರೆ ಅವನು ನಿರಾಶನಾಗಿ ಕೃತಫ್ನತೆ ತೋರಲಾರಂಭಿಸುತ್ತಾನೆ.


10وَلَئِنْ أَذَقْنَاهُ نَعْمَاءَ بَعْدَ ضَرَّاءَ مَسَّتْهُ لَيَقُولَنَّ ذَهَبَ السَّيِّئَاتُ عَنِّي ۚ إِنَّهُ لَفَرِحٌ فَخُورٌ

ಅವನ ಮೇಲೆ ಬಂದಿದ್ದ ಕಷ್ಟಗಳ ಅನಂತರ ನಾವು ಅವನಿಗೆ 'ಸೌಭಾಗ್ಯ'ಗಳ ಸವಿಯನ್ನುಣಿಸಿದಾಗ ಅವನು ನನ್ನ ಎಲ್ಲಾ ದುರದೃಷ್ಟಗಳೂ ತೊಲಗಿದುವು ಎನ್ನುತ್ತಾನೆ. ಅನಂತರ ಅವನು ಆನಂದ ತುಂದಿಲನಾಗುತ್ತಾನೆ ಮತ್ತು ಅಹಂಕಾರಪಡುತ್ತಾನೆ.